ಬೆಂಗಳೂರು :ಬಿಬಿಎಂಪಿ ವತಿಯಿಂದ ನಿರ್ಮಾಣವಾಗಿದ್ದ ಕೆಂಪೇಗೌಡ ಉದ್ಯಾನವನದ ಪಾರ್ಕ್‌ನಲ್ಲಿರುವ ಹೊಂಡದಲ್ಲಿ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದಾನೆ. ನಗರದ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ಈ ಘಟನೆ ನಡೆದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರತಾಪ್ ಎಂಬ 8 ವರ್ಷದ ಬಾಲಕ ಆಟವಾಡುವ ವೇಳೆ ಹೊಂಡಕ್ಕೆ ಬಿದ್ದು ಸಾವಿಗೀಡಾಗಿದ್ದಾನೆ. ಬಾಲಕನು ರುದ್ರಮುನಿ ಹಾಗೂ ಕಾಂತಮಣಿ ಎಂಬ ದಂಪತಿ ಮಗ ಎಂದು ಗುರುತಿಸಲಾಗಿದೆ. ಮಳೆಯಿಂದ ಪಾರ್ಕ್ನ ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಹೀಗಾಗಿ, ಬಾಲಕ ಆಟವಾಡುವಾಗ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.