ಕೆ.ಆರ್ ಪುರ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕೆ.ಆರ್ ಪುರ ಕ್ಷೇತ್ರದ ವಿಜಿನಾಪುರ, ಹೊರಮಾವು ಹಾಗೂ ರಾಮಮೂರ್ತಿ ನಗರ ವಾರ್ಡ್ನ ಮಹಿಳೆಯರಿಗೆ ಪ್ರತಿ ವರ್ಷದಂತೆ ಬೆಂಗಳೂರು ಉತ್ತರ ಜಿಲ್ಲಾ ಎಸ್ಟಿ ಮೋರ್ಚಾದ ಅಧ್ಯಕ್ಷ ಬಾಕ್ಸರ್ ನಾಗರಾಜ್ ಅವರು ಬಾಗಿನ ನೀಡುವ ಕಾರ್ಯಕ್ರಮ ಏರ್ಪಡಿಸಿದ್ದರು.
ಗೌರಿ - ಗಣೇಶ ಹಬ್ಬದ ನಿಮಿತ್ತ 6 ಸಾವಿರ ಮಹಿಳೆಯರಿಗೆ ಬಾಗಿನ ನೀಡಿದ ಬಾಕ್ಸರ್ ನಾಗರಾಜ್
ಆರು ಸಾವಿರ ಮಹಿಳೆಯರಿಗೆ ಬಾಕ್ಸರ್ ನಾಗರಾಜ್ ಅವರು ಸೀರೆಗಳನ್ನ ನೀಡಿ, ತಾಯಂದಿರ ಆಶೀರ್ವಾದ ಪಡೆದರು. ಸೀರೆ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಚಾಲನೆ ನೀಡಿದರು
ಸುಮಾರು ಆರು ಸಾವಿರ ಮಹಿಳೆಯರು ಸೀರೆಗಳನ್ನು ಪಡೆದು ಬಾಕ್ಸರ್ ನಾಗರಾಜ್ ಅವರಿಗೆ ಆಶೀರ್ವಾದ ಮಾಡಿದರು. ಸೀರೆ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೆ.ಆರ್ ಪುರ ಕ್ಷೇತ್ರದಲ್ಲಿ ಗೌರಿ - ಗಣೇಶ ಹಬ್ಬಕ್ಕೆ ಸೀರೆ ನೀಡುವ ವಾಡಿಕೆ ಇದೆ. ಅದರಂತೆಯೇ ಇಂದು ಬಾಕ್ಸರ್ ನಾಗರಾಜ್ ಆರು ಸಾವಿರ ಸೀರೆಗಳನ್ನು ವಿತರಿಸಿದ್ದಾರೆ. ಕೊರೊನಾವನ್ನು ವಿಘ್ನೇಶ್ವರ ನಿರ್ನಾಮ ಮಾಡಲಿ, ದೇಶ ಹಾಗೂ ರಾಜ್ಯ ಮರಳಿ ಸಹಜ ಸ್ಥಿತಿಗೆ ತಲುಪಲಿ ಎಂದು ಆಶಿಸಿದರು. ಇದೇ ವೇಳೆ, ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಗಣೇಶ ಹಬ್ಬಕ್ಕೆ ಎಲ್ಲರಿಗೂ ಶುಭವಾಗಲಿ ಎಂದು ಕೋರಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬ ಆಚರಿಸಿ ಎಂದು ಜನರಲ್ಲಿ ಮನವಿ ಕೂಡಾ ಮಾಡಿದರು.
ನಮ್ಮ ಕೆ.ಆರ್ ಪುರ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ಮಹಿಳೆಯರಿಗೆ ಬಾಗಿನ ಕೊಡುತ್ತಾ ಬರುತ್ತಿದ್ದೇವೆ. ಅದೇ ರೀತಿಯ ಈ ವರ್ಷ ಕೊರೊನಾ ಮಹಾಮಾರಿ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಆರು ಸಾವಿರ ಮಹಿಳೆಯರಿಗೆ ಬಾಗಿನ ವಿತರಣೆ ಮಾಡಿದ್ದೇವೆ. ದೇವರು ಪ್ರಪಂಚದಲ್ಲಿ ಹರಡಿರುವ ಕೊರೊನಾವನ್ನು ಆದಷ್ಟು ಬೇಗ ನಿವಾರಣೆ ಮಾಡಲಿ ಎಂದು ಗಣೇಶನಲ್ಲಿ ಬೇಡಿಕೊಂಡರು.