ದೊಡ್ಡಬಳ್ಳಾಪುರ:ವ್ಯಕ್ತಿಯೊಬ್ಬ ಬೌನ್ಸ್ ಸ್ಕೂಟರ್ ಬಾಡಿಗೆಗೆ ಪಡೆದು ಹಿಂದೂಪುರ-ಬೆಂಗಳೂರು ನಡುವಿನ ನಗರದ ಸಮೀಪದಲ್ಲಿ ಬಿಟ್ಟು ತೆರಳಿದ್ದು, ಕಳೆದೊಂದು ವಾರದಿಂದ ಕೇಳುವವರಿಲ್ಲದೆ ರಸ್ತೆ ಬದಿಯಲ್ಲಿ ಬೈಕ್ ಅನಾಥವಾಗಿ ನಿಂತಿದೆ.
ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿರುವ ಬೌನ್ಸ್ ಸ್ಕೂಟರ್: ಬಿಡಿ ಭಾಗಗಳು ಕಿಡಿಗೇಡಿಗಳ ಪಾಲು - bounce scooter parts theft dhodballapura
ವ್ಯಕ್ತಿಯೊಬ್ಬ ಬೌನ್ಸ್ ನಿಂದ ಬೈಕ್ ಬಾಡಿಗೆಗೆ ಪಡೆದು ಹಿಂದೂಪುರ-ಬೆಂಗಳೂರು ನಡುವಿನ ನಗರ ಸಮೀಪದಲ್ಲಿ ಬಿಟ್ಟು ತೆರಳಿದ್ದ. ಕಳೆದೊಂದು ವಾರದಿಂದ ಈ ಬೈಕ್ ರಸ್ತೆ ಬದಿಯಲ್ಲೇ ಅನಾಥವಾಗಿ ನಿಂತಿದ್ದು ಬಿಡಿಭಾಗಗಳು ಕಿಡಿಗೇಡಿಗಳ ಪಾಲಾಗಿವೆ.
ಬೌನ್ಸ್ ಸ್ಕೂಟರ್
ಸ್ವಂತ ಬೈಕ್ ಇಲ್ಲದವರಿಗೆ ಅಥವಾ ತಮ್ಮ ತುರ್ತು ಕೆಲಸಗಳಿಗೆ ಸ್ಕೂಟರ್ ಅವಶ್ಯಕತೆ ಇದ್ದವರಿಗೆ ನಗರದಲ್ಲಿ ಸಂಚರಿಸಲು ಅನುಕೂಲ ಆಗಲಿ ಎಂಬ ಉದ್ದೇಶದಿಂದ ಬೌನ್ಸ್ ಸ್ಕೂಟರ್ ಸೇವೆ ಈಗ ಬೆಂಗಳೂರು ನಗರದಲ್ಲಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದರ ಬಳಕೆದಾರರು ಹೆಚ್ಚಾಗುತ್ತಿದ್ದಾರೆ.
ರಸ್ತೆ
ಕಿಡಿಗೇಡಿಗಳು ರಸ್ತೆ ಬದಿ ನಿಲ್ಲಿಸಲಾದ ಬೈಕ್ನಲ್ಲಿರುವ ಬೆಲೆ ಬಾಳುವ ಬಿಡಿ ಭಾಗಗಳನ್ನು ಹೊತ್ತೊಯ್ದಿದ್ದಾರೆ. ಈ ಕುರಿತಂತೆ ಬೌನ್ಸ್ ಸಹಾಯವಾಣಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದ್ರೆ, ಕಂಪನಿಯವರು ಸ್ಪಂದಿಸದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.