ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮತ್ತು ನಾಳೆ ಭಾರತ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಟಲ್ ಕಲಾವಿದ ಬಸವರಾಜು ಅವರು ವಿಶೇಷವಾಗಿ ಬಾಟಲ್ ಕಲೆ ಮೂಲಕ ಸ್ವಾಗತಿಸಿದ್ದಾರೆ.
ವಿಭಿನ್ನವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ನ್ನು ಸ್ವಾಗತಿಸಿದ ಬಾಟಲ್ ಬಸವರಾಜು! - Bottle Basavaraju greeted US President Trump,
ಬಾಟಲ್ ಬಸವರಾಜು ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ವಿಭಿನ್ನವಾಗಿ ಸ್ವಾಗತಿಸಿದ್ದಾರೆ.
ವಿಭಿನ್ನವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ನ್ನು ಸ್ವಾಗತಿಸಿದ ಬಾಟಲ್ ಬಸವರಾಜು
ಭಾರತಕ್ಕೆ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್‌ಗೆ ಸ್ವಾಗತ ಕೋರಲು ಒಂದು ದೊಡ್ಡ ಗಾಜಿನ ಬಾಟಲಿನಲ್ಲಿ ಟ್ರಂಪ್ ಅವರ ಚಿತ್ರವಿರುವ ಒಂದು ಫೋಟೊ ಹಾಗೂ ಮತ್ತೊಂದು ಬಾಟಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಅವರುಗಳು ನಡೆದು ಬರುತ್ತಿರುವ ಚಿತ್ರವನ್ನು ಪ್ರದರ್ಶಿಸಿದ್ದಾರೆ.
ಬಾಟಲ್ ಬಸವರಾಜ ಬಾಟಲ್‌ನಲ್ಲಿ ಫೋಟೋ ಸೇರಿಸುವ ಕಲಾವಿದರು. ಮತದಾನ ಸಂದರ್ಭದಲ್ಲಿ ಮತ ಚಲಾಯಿಸುವ ಸಂದೇಶ, ಗಾಂಧಿ ಜಯಂತಿಗೆ ಗಾಂಧಿ ಫೋಟೋಗಳನ್ನು ಪ್ರದರ್ಶಿಸಿದ್ದಾರೆ. ಈ ಬಾರಿ ಟ್ರಂಪ್ ಹಾಗೂ ಮೋದಿ ಅವರುಗಳ ಫೋಟೋ ಫ್ರೇಮ್ ಪ್ರದರ್ಶಿಸಿದ್ದಾರೆ.