ಬೆಂಗಳೂರು: ಮೈಸೂರಿನ ಸುತ್ತೂರು ಮಠದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 105ನೇ ಜಯಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವರ್ಚುವಲ್ ಸಮಾರಂಭದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಅಧ್ಯಕ್ಷತೆ ವಹಿಸಿ ಭಾಗವಹಿಸಿದ್ದರು.
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 105ನೇ ಜಯಂತಿ; ದೇವೇಗೌಡರಿಂದ ಕೃತಿ ಬಿಡುಗಡೆ - Rajendra Swamiji birth day
ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 105ನೇ ಜಯಂತಿಯ ಅಂಗವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಶ್ರೀಗಳ ಕುರಿತಾದ ಕೃತಿ ಬಿಡುಗಡೆ ಮಾಡಿದರು.
ದೇವೇಗೌಡರಿಂದ ಕೃತಿ ಬಿಡುಗಡೆ
ಪದ್ಮನಾಭನಗರದ ತಮ್ಮ ನಿವಾಸದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ದೇವೇಗೌಡರು ಪಾಲ್ಗೊಂಡು ಶ್ರೀಗಳ ಕುರಿತಾದ ಕೃತಿ ಬಿಡುಗಡೆ ಮಾಡಿದರು.
ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮೈಸೂರಿನಲ್ಲಿ ಈ ಡಿಜಿಟಲ್ ಸಮಾರಂಭ ನಡೆದಿದೆ.