ಆನೇಕಲ್: ಇಲ್ಲಿನ ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಯುಕ್ತಾಶ್ರಯದಲ್ಲಿ ಕೆರೆ ಅಭಿವೃದ್ಧಿ ಹಾಗೂ ಉದ್ಯಾನ ನಿರ್ಮಾಣ ಕಾರ್ಯವನ್ನು ಉದ್ಯಮಿಗಳು ಕೈಗೆತ್ತಿಕೊಂಡಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕೈಗಾರಿಕೋದ್ಯಮಿಗಳಿಂದ ಬೊಮ್ಮಸಂದ್ರ ಕೆರೆ ಅಭಿವೃದ್ಧಿ: ರಾಮಲಿಂಗಾ ರೆಡ್ಡಿ - ಬೆಂಗಳೂರಲ್ಲಿ ಬೊಮ್ಮಸಂದ್ರ ಕೆರೆ ಅಭಿವೃದ್ಧಿ ಕುರಿತ ಚರ್ಚೆ
ಇಲ್ಲಿನ ಬೊಮ್ಮಸಂದ್ರ ಕೆರೆ ಅಭಿವೃದ್ಧಿಗೆ ಕೈಗಾರಿಕೋದ್ಯಮಿಗಳು ಬದ್ಧವಾಗಿದ್ದಾರೆ. ಈಗಾಗಲೇ ಉದ್ಯಾನ, ಭದ್ರತೆ ಸೇರಿದಂತೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೈಗಾರಿಕೋದ್ಯಮಿಗಳ ಕೆರೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ
ಬೊಮ್ಮಸಂದ್ರದ ಕೆರೆಯನ್ನು ಇಲ್ಲಿನ ಕೈಗಾರಿಕಾ ಪ್ರದೇಶಾಭಿವೃದ್ದಿ ಒಕ್ಕೂಟ ದುರಸ್ತಿಗೊಳಿಸಿ, ಶುದ್ಧ ಕುಡಿಯುವ ನೀರಿನ ಕೆರೆಯನ್ನಾಗಿ ಮಾಡುವ ಯೋಜನೆಗೆ ಒಪ್ಪಿಕೊಂಡಿದ್ದಾರೆ ಎಂದರು.
28 ಎಕರೆಯ ಕೆರೆಯ ಸ್ವಚ್ಛಗೊಳಿಸಲು ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಎಲ್ಲ ಕೈಗಾರಿಕೋದ್ಯಮಿಗಳು ಕೆರೆ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ಬಿಇಎ ಅಧ್ಯಕ್ಷ ಪ್ರಸಾದ್ ತಿಳಿಸಿದರು.
TAGGED:
ಬೊಮ್ಮಸಂದ್ರ ಕೆರೆ ಅಭಿವೃದ್ಧಿ