ಬೆಂಗಳೂರು:ಡಿಜೆ ಹಳ್ಳಿ ಗಲಭೆ ಹಾಗೂ ಡ್ರಗ್ಸ್ ಜಾಲ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟು ಅಪರಿಚಿತನೊಬ್ಬ ಬಾಂಬ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ನಲ್ಲಿ ತಪಾಸಣೆ ನಡೆಸಲಾಯಿತು.
ಹುಸಿ ಬಾಂಬ್ ಪತ್ರ ಹಿನ್ನೆಲೆ: ಕೋರ್ಟ್ನಲ್ಲಿ ತಪಾಸಣೆ ನಡೆಸಿದ ಬಾಂಬ್ ನಿಷ್ಕ್ರಿಯ ದಳ
ಸೋಮವಾರ ಅಪರಿಚಿತನೊಬ್ಬ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪತ್ರವನ್ನು ಉಗ್ರ ಸಂಘಟನೆಯ ಹೆಸರಿನಲ್ಲಿ ಬರೆದಿದ್ದ. ಸೆಷನ್ಸ್ ಕೋರ್ಟ್ನಲ್ಲಿ ತಪಾಸಣೆ ನಡೆಸಲು ಪೊಲೀಸರಿಗೆ ಹೈಕೋರ್ಟ್ ನ್ಯಾಯಧೀಶರು ಸೂಚನೆ ನೀಡಿದರು.
ಬಾಂಬ್ ನಿಷ್ಕ್ರಿಯ ದಳ
ಸೋಮವಾರ ಸಂಜೆ ಅಪರಿಚಿತನೊಬ್ಬ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪತ್ರವನ್ನು ಉಗ್ರ ಸಂಘಟನೆಯ ಹೆಸರಿನಲ್ಲಿ ಬರೆದಿದ್ದ. ಹೀಗಾಗಿ, ಸೆಷನ್ಸ್ ಕೋರ್ಟ್ನಲ್ಲಿ ತಪಾಸಣೆ ನಡೆಸುವಂತೆ ಪೊಲೀಸರಿಗೆ ಹೈಕೋರ್ಟ್ ನ್ಯಾಯಧೀಶರು ಸೂಚನೆ ನೀಡಿದರು.
ನ್ಯಾಯಾಧೀಶರ ಸೂಚನೆಯಂತೆ ನ್ಯಾಯಾಲಯವನ್ನು ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನದಳ ತಪಾಸಣೆ ನಡೆಸಿತು. ನ್ಯಾಯಾಲಯದ ಸಂಕೀರ್ಣದ ಒಳಗೆ ಹೊರಗೆ ಪೊಲೀಸರು ಪರಿಶೀಲನೆ ನಡೆಸಿ, ಕೋರ್ಟ್ ಆವರಣದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.