ಕರ್ನಾಟಕ

karnataka

ಡಿಜೆ ಹಳ್ಳಿ ಗಲಭೆ, ಡ್ರಗ್ಸ್​ ಪ್ರಕರಣ: ಜಡ್ಜ್, ಕಮಿಷನರ್ ಸೇರಿ ಮೂವರಿಗೆ ಬಾಂಬ್ ಬೆದರಿಕೆ ಪತ್ರ!

By

Published : Oct 19, 2020, 9:12 PM IST

Updated : Oct 21, 2020, 1:37 PM IST

ಇಂದು ಸಂಜೆ ಸಿಟಿ ಸಿವಿಲ್ ಕೋರ್ಟ್ ಹಾಲ್ ನಂಬರ್ 36ಕ್ಕೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಪತ್ರ ಬಂದ ಹಿನ್ನಲೆ, ತೀವ್ರ ಆತಂಕಕ್ಕೊಳಗಾಗಿ ಜಡ್ಜ್ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

halasur gate police station
ಹಲಸೂರು ಗೇಟ್ ಪೊಲೀಸ್​ ಠಾಣೆ

ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್​ಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಪತ್ರ ಬಂದ ಹಿನ್ನೆಲೆಯಲ್ಲಿ ಕೆಲಕಾಲ ತೀವ್ರ ಆತಂಕಕ್ಕೆ ಒಳಗಾಗುವಂತಾಯಿತು.

ಇಂದು ಸಂಜೆ 5 ಗಂಟೆ ಸುಮಾರಿಗೆ ಸಿಟಿ ಸಿವಿಲ್ ಕೋರ್ಟ್ ಹಾಲ್ ನಂಬರ್ 36ಕ್ಕೆ ಅನಾಮಧೇಯ ಪತ್ರ ಬಂದಿದೆ. ಪತ್ರದಲ್ಲಿ ವೈರ್​ಗಳಿರುವುದು ಕಂಡು ತೀವ್ರ ಆತಂಕಕ್ಕೊಳಗಾಗಿ ಜಡ್ಜ್ ಹಲಸೂರು ಗೇಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹಲಸೂರು ಗೇಟ್ ಪೊಲೀಸ್​ ಠಾಣೆ

ಕೂಡಲೇ‌ ಕಾರ್ಯಪ್ರವೃತ್ತರಾಗಿ ಪೊಲೀಸರ ಜೊತೆಗೆ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಅದು ಹುಸಿ ಬಾಂಬ್ ಪತ್ರ ಎಂಬುವುದು ಗೊತ್ತಾಗಿದೆ. ಹುಸಿ ಬಾಂಬ್ ಕರೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಗೆ ಹಸ್ತಾಂತರವಾಗಿದೆ.

ಪೊಲೀಸ್ ಕಮೀಷನರ್ ಕಮಲ್ ಪಂತ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಇನ್ನೆರಡು ಪತ್ರಗಳು ಕಳುಹಿಸಿದ್ದಾರೆ. ಪತ್ರದ ಜೊತೆಗೆ ಡಿಟೋನೆಟರ್ ಮಾದರಿಯ ವಸ್ತು ಹಾಗೂ ವೈರ್​ಗಳು ಸಿಕ್ಕಿದ್ದು ಸದ್ಯ ಸಿಕ್ಕ ವಸ್ತುಗಳು ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೇ ಸಿಸಿಬಿ ತನಿಖೆ ನಡೆಸುತ್ತಿರುವ ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣ ಹಾಗೂ ಡಿ.ಜೆ.ಹಳ್ಳಿ - ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಪತ್ರ ಬಂದಿದೆ. ಪ್ರಕರಣದ ತನಿಖೆಯಿಂದ ಹಿಂದೆ ಸರಿಯುವಂತೆ ಪೊಲೀಸರಿಗೆ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ‌ ಜಂಟಿ ಅಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Last Updated : Oct 21, 2020, 1:37 PM IST

ABOUT THE AUTHOR

...view details