ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರ ತಪ್ಪಿಸಲು ಹೊಯ್ಸಳ ಮತ್ತು ಬೀಟ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ

ಸಂಚಾರಿ ಪೊಲೀಸರ ಮೇಲೆ ಆರೋಪಗಳು ಬಂದಾಗ ಬಾಡಿವೋರ್ನ್ ಕ್ಯಾಮೆರಾ ನೀಡಲಾಗಿತ್ತು. ಬಾಡಿವೋರ್ನ್ ಕ್ಯಾಮರಾ ಮೂಲಕ ಪೊಲೀಸರನ್ನು ಲೈವ್ ಮಾನಿಟರ್ ಮಾಡಬಹುದು. ಈ ಮೂಲಕ ಪೊಲೀಸರ ಮೇಲಿನ ಆರೋಪಗಳಿಗೆ ಕಡಿವಾಣ ಹಾಕಲು ಸಾಕಷ್ಟು ಉಪಕಾರಿಯಾಗಲಿದೆ‌.

ಬಾಡಿವೋರ್ನ್ ಕ್ಯಾಮರಾ
ಬಾಡಿವೋರ್ನ್ ಕ್ಯಾಮರಾ

By

Published : Dec 19, 2022, 8:52 PM IST

ಬೆಂಗಳೂರು:ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂದಿಯಿಂದ ದಂಪತಿ ಬಳಿ ವಸೂಲಿ ಮಾಡಿ ಅಮಾನತ್ತಾದ ಪ್ರಕರಣ ಬಳಿಕ ಎಚ್ಚೆತ್ತುಕೊಂಡಿರುವ ನಗರ ಪೊಲೀಸರು ನೈಟ್ ರೌಂಡ್ಸ್ ಪೊಲೀಸರು ಮಾನಿಟರ್​ಗೆ ಹೊಸ ಪ್ಲಾನ್ ಮಾಡಿದ್ದಾರೆ.

ಪದೇ ಪದೆ ನೈಟ್ ಪೊಲೀಸ್ ಸಿಬ್ಬಂದಿ ಮೇಲೆ ಕೇಳಿಬರುತ್ತಿರುವ ಆರೋಪ ಹಿನ್ನೆಲೆ ಈ ಪ್ಲಾನ್ ಮಾಡಿದ್ದು, ಟ್ರಾಫಿಕ್ ಪೊಲೀಸರ ರೀತಿ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡುತ್ತಿದ್ದಾರೆ. ಪೊಲೀಸರ ಮೇಲಿನ ಆರೋಪಗಳ ಬೆನ್ನಲ್ಲೇ ಇಂತಹದೊಂದು ಚಿಂತನೆ‌ ನಡೆಸಿರುವ ಇಲಾಖೆ ನಗರದ ಎಲ್ಲಾ ನೈಟ್ ಬೀಟ್​ನಲ್ಲಿರೋ ಪೊಲೀಸರಿಗೆ ಬಾಡಿವೋರ್ನ್​ ಕ್ಯಾಮರಾ ನೀಡಲು ಸಿದ್ಧತೆ ನಡೆಸಿದೆ.

ಸಂಚಾರಿ ಪೊಲೀಸರ ಮೇಲೆ ಆರೋಪಗಳು ಬಂದಾಗ ಬಾಡಿವೋರ್ನ್ ಕ್ಯಾಮರಾ ನೀಡಲಾಗಿತ್ತು. ಬಾಡಿವೋರ್ನ್ ಕ್ಯಾಮರಾ ಮೂಲಕ ಪೊಲೀಸರನ್ನು ಲೈವ್ ಮಾನಿಟರ್ ಮಾಡಬಹುದು. ಈ ಮೂಲಕ ಪೊಲೀಸರ ಮೇಲಿನ ಆರೋಪಗಳಿಗೆ ಕಡಿವಾಣ ಹಾಕಲು ಸಾಕಷ್ಟು ಉಪಕಾರಿಯಾಗಲಿದೆ‌. ಈ ಹಿನ್ನೆಲೆ ಕೆಲವೇ ದಿನಗಳಲ್ಲಿ ಲಾ ಆ್ಯಂಡ್ ಆರ್ಡರ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ ನೀಡಲು ಇಲಾಖೆ ಸನ್ನದ್ಧವಾಗಿದೆ. ಇದರಿಂದ ಆರೋಪಗಳು ಅಷ್ಟೇ ಅಲ್ಲ, ಪೊಲೀಸರ ನಡವಳಿಕೆಯನ್ನೂ ಬಾಡಿವೋರ್ನ್ ಮೂಲಕ ಮಾನಿಟರ್ ಮಾಡಲು ಸಹಕಾರಿಯಾಗಿದೆ.

ಓದಿ:ರಾಜ್ಯದಲ್ಲಿ ಈ ವರ್ಷ ಹೆಚ್ಚು ಪೊಲೀಸರು ಸಸ್ಪೆಂಡ್: ಕಳೆದ 4 ವರ್ಷಗಳಲ್ಲೇ ಅಧಿಕ!

ABOUT THE AUTHOR

...view details