ಕರ್ನಾಟಕ

karnataka

ETV Bharat / state

ಸಾವಿರಾರು ದೂರು ಬಂದರೂ ತಲೆಕೆಡಿಸಿಕೊಳ್ಳದ ಬಿಎಂಟಿಎಫ್: ಸಾರ್ವಜನಿಕರ ಅಸಮಾಧಾನ - ಸಾವಿರಾರು ದೂರು ಬಂದರೂ ತಲೆಕೆಡಿಸಿಕೊಳ್ಳದ ಬಿಎಂಟಿಎಫ್

ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ ಬಿಎಂಟಿಎಫ್ ಅಧಿಕಾರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಪೊಲೀಸ್​ ಉಪಾಧೀಕ್ಷಕರ ಕಚೇರಿ
ಪೊಲೀಸ್​ ಉಪಾಧೀಕ್ಷಕರ ಕಚೇರಿ

By

Published : Jul 1, 2022, 7:41 PM IST

ಬೆಂಗಳೂರು: ಬಿಎಂಟಿಎಫ್ ಎಂದು ಒಂದು ಪೊಲೀಸ್ ವಿಂಗ್ ಇದೆ.‌ ಬೆಂಗಳೂರಿನ ಬಹುತೇಕ ಮಂದಿಗೆ ಗೊತ್ತಿಲ್ಲ.‌ ಅಷ್ಟರ ಮಟ್ಟಿಗಿದೆ ಸಂಸ್ಥೆಯ ಕಾರ್ಯವೈಖರಿ. ಸುಮ್ಮನೆ ಕಾಲಹರಣ ಮಾಡುವ ಬಿಎಂಟಿಎಫ್ ಇದೀಗ ಮತ್ತೆ ತನ್ನ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.


ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್​ ಎಂಬ ಸರ್ಕಾರದ ಇಲಾಖೆ ಸರ್ಕಾರಿ ಸ್ವತ್ತು, ಬಿಬಿಎಂಪಿ ಆಸ್ತಿಗಳನ್ನು ಭೂಗಳ್ಳರಿಂದ, ಮಾಫಿಯಾಗಳಿಂದ ರಕ್ಷಣೆ ಮಾಡಿ ಸರ್ಕಾರ ಹಾಗೂ ಬಿಬಿಎಂಪಿ ಅಧೀನದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಂತಲೇ ಇಲ್ಲಿ ಉನ್ನತ ಐಪಿಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿ, ಎಡಿಜಿಪಿ, ಎಸ್ ಪಿ, ಡಿ.ವೈ.ಸಿ.ಪಿ ಹೀಗೆ ಪೊಲೀಸ್ ಹೈರಾರ್ಕಿಯಂತೆ ನೇಮಕಾತಿಯೂ ನಡೆಯುತ್ತದೆ.

ಆದರೆ ಲಕ್ಷ ಖರ್ಚು ಮಾಡಿ ಇಲಾಖೆ ನಡೆಸುತ್ತಿದ್ದರೂ ಈ ಕಾರ್ಯಪಡೆಯಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆರ್.ಟಿ.ಐ ನಲ್ಲಿ ಪಡೆದ ದಾಖಲೆಗಳು ಇದಕ್ಕೆ ಪುಷ್ಠಿ ನೀಡುವಂತಿದೆ.

ಸಾರ್ವಜನಿಕರ ಅಸಮಾಧಾನ:ಕಳೆದ ಐದು ವರ್ಷದಲ್ಲಿ ಸಾವಿರಾರು ದೂರು ಬಂದರೂ ಬಿಎಂಟಿಎಫ್ ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಕಾಲಹರಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಸಾವಿರಾರು ದೂರುಗಳು ಬಂದರೂ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯವಾಗಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಆಸ್ತಿ ಕಾಪಾಡಬೇಕಾದ ಇಲಾಖೆ ಇದಾಗಿದ್ದು, ಆಸ್ತಿ ರಕ್ಷಣೆ ಮಾಡುವ ಬದಲು ಭ್ರಷ್ಟರ ರಕ್ಷಣೆ ಮಾಡುತ್ತಿದೆಯಾ? ಎನ್ನುವ ಅನುಮಾನ ಶುರುವಾಗಿದೆ.‌ ಕಳೆದ ಹಲವು ವರ್ಷಗಳಿಂದ ಯಾವೊಂದು ಪ್ರಕರಣದಲ್ಲೂ ಕಾರ್ಯಪ್ರವೃತ್ತವಾಗಿಲ್ಲ ಬಿಎಂಟಿಎಫ್ ಪಡೆ. ಏಕೆಂದರೆ ಆರ್​.ಟಿ.ಐ ನಲ್ಲಿ ಪಡೆದ ದಾಖಲೆಯಲ್ಲಿ ಸಂಸ್ಥೆಯ ಕಾರ್ಯವೈಖರಿ ಬಟಾಬಯಲಾಗಿದೆ.

ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಕೋರಿ ಪತ್ರ
ಬಿಎಂಟಿಎಫ್ ಕಾರ್ಯಗಳೇನು?:
- ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡುವುದು

- ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡುವುದು
- ಒತ್ತುವರಿ ಆಗಿರುವ ಸ್ವತ್ತನ್ನು ತೆರವು ಮಾಡುವುದು
- ಬಫರ್ ಝೋನ್​ನಲ್ಲಿ ಒತ್ತುವರಿ ಇದ್ದರೆ ತೆರವು ಕಾರ್ಯ

ಬಿಎಂಟಿಎಫ್ ಮೇಲಿರುವ ಆರೋಪಗಳು:

- ವೆಬ್ ಸೈಟ್​ನಲ್ಲಿ ಯಾವುದೇ ಮಾಹಿತಿ ಹಾಕುತ್ತಿಲ್ಲ
- ಪಾರದರ್ಶಕ ಆಡಳಿತ ನಡೆಸುತ್ತಿಲ್ಲ
- ಭೂಗಳ್ಳರನ್ನ ರಕ್ಷಣೆ ಮಾಡುವ ಕೆಲಸವಾಗುತ್ತಿದೆ
- ರಸ್ತೆ ಒತ್ತುವರಿ ಆಗಿದೆ ಅಂತ ದೂರು ಕೊಟ್ಟರೂ ಕ್ರಮ ಆಗಿಲ್ಲ
- ದೂರುದಾರರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ
- ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ರಕ್ಷಣೆ

ಸರ್ಕಾರಿ ಸ್ವತ್ತನ್ನು ರಕ್ಷಣೆ ಮಾಡದೇ ಕಾಲಹರಣ ಮಾಡ್ತಿದೆ ಅನ್ನೋ ಆರೋಪ ತಮ್ಮ ಮೇಲೆ ಇದ್ದರೂ ಮತ್ತಷ್ಟು ಅಧಿಕಾರಿ ವ್ಯಾಪ್ತಿ ಕೊಡಿ ಅಂತ ನಗರಾಭಿವೃದ್ಧಿ ಇಲಾಖೆಗೆ ಬಿಎಂಟಿಎಫ್ ಎಡಿಜಿಪಿ ಪತ್ರ ಬರೆದಿದ್ದಾರೆ. ಈಗಿರುವ ಕಾರ್ಯದ ಜತೆ ಅಕ್ರಮ ಕಟ್ಟಡಗಳ ತೆರವು ಜವಾಬ್ದಾರಿ ನೀಡುವಂತೆ ಪತ್ರ ಬರೆಯಲಾಗಿದೆ. ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಕಳೆದ ಐದು ವರ್ಷದಲ್ಲಿ ಬಿಎಂಟಿಎಫ್ ಮಾಡಿದ್ದೇನು.?

ವರ್ಷ ದೂರುಗಳು ಬಿ ರಿಪೋರ್ಟ್

2018-19 280 06

2019-20 474 05

2020-21 366 01

2021-22 392 02

2022-23 177

ಒಟ್ಟು -1,68,913

ಇದನ್ನೂ ಓದಿ:ಎಂಆರ್​ಪಿಗಿಂತ ಹೆಚ್ಚು ವಸೂಲಿ: ಅಂಗಡಿ ಮಾಲೀಕನಿಗೆ 110 ಪಟ್ಟು ಹೆಚ್ಚು ದಂಡ ಬರೆ

ABOUT THE AUTHOR

...view details