ಬೆಂಗಳೂರು: ಇಂದು ನಾಡಿನೆಲ್ಲೆಡೆ ಯುಗಾದಿ ಸಂಭ್ರಮ ಮನೆ ಮಾಡಿದೆ. ಆದರೆ ಬಿಎಂಟಿಸಿ ನೌಕರರು ಮಾತ್ರ ತಿಂಗಳ ವೇತನ ಪಡೆಯದೆ ಬೇಸರದಲ್ಲೆ ಯುಗಾದಿ ಹಬ್ಬ ಆಚರಿಸುವಂತಾಗಿದೆ.
ಬಿಎಂಟಿಸಿ ನೌಕರರ ವೇತನ ಸಮಸ್ಯೆ: ಬೇಸರದಲ್ಲೇ ಯುಗಾದಿ ಆಚರಣೆ - undefined
ಬಿಎಂಟಿಸಿ ನೌಕರರು ತಿಂಗಳ ವೇತನ ಪಡೆಯದೆ ಪರದಾಡುತ್ತಿದ್ದು, ಬೇಸರದಲ್ಲೇ ಯುಗಾದಿ ಹಬ್ಬ ಆಚರಿಸುತ್ತಿದ್ದಾರೆ.
![ಬಿಎಂಟಿಸಿ ನೌಕರರ ವೇತನ ಸಮಸ್ಯೆ: ಬೇಸರದಲ್ಲೇ ಯುಗಾದಿ ಆಚರಣೆ](https://etvbharatimages.akamaized.net/etvbharat/images/768-512-2922865-thumbnail-3x2-bhagirat.jpg)
ಬಿಎಂಟಿಸಿ
ಪ್ರತಿ ತಿಂಗಳ 5 ತಾರೀಖಿನಂದು ಬಿಎಂಟಿಸಿ ಅಧಿಕಾರಿಗಳಿಗೆ ಸಂಬಳ ಆಗುತ್ತಿತ್ತು. ಆದರೆ ಇನ್ನೂ ಸಂಬಳ ಆಗಿಲ್ಲ. ಸುಮಾರು 36 ಸಾವಿರ ಬಿಎಂಟಿಸಿ ಸಿಬ್ಬಂದಿಗೆ ವೇತನ ಆಗಿಲ್ಲ. ಸಂಬಳವಾಗದ ಬಿಎಂಟಿಸಿ ನೌಕರರ ಖುಷಿಗೆ ಕರಿ ನೆರಳು ಬಂದಂತಾಗಿದೆ.
ಪ್ರತಿ 5ನೇ ತಾರೀಖಿನೊಳಗೆ ಸಂಬಳ ಬಿಡುಗಡೆ ಮಾಡುವಂತೆ ಎಂಡಿ ಪ್ರಸಾದ್ ಆದೇಶಿಸಿದ್ದರು. ಈ ಆದೇಶವನ್ನು ಮೂಲೆ ಗುಂಪು ಮಾಡಿ ಅಧಿಕಾರಿಗಳು ವೇತನ ನೀಡದಿದ್ದರಿಂದ ನೌಕರರ ಸಂಭ್ರಮ ಇಲ್ಲದಂತಾಗಿದೆ.