ಬೆಂಗಳೂರು: ಜನವರಿ ಕೊನೆಯ ವಾರ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ಚಲಿಸುತ್ತಿದ್ದ ಎರಡು ಬಿಎಂಟಿಸಿ ಬಸ್ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಈ ರೀತಿಯ ಪ್ರಕರಣಗಳು ಮರುಕಳಿಸಿದ ಪರಿಣಾಮ ಬಿಎಂಟಿಸಿ ಮಿಡಿ ಬಸ್‌ಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬಿಎಂಟಿಸಿ 2014ರಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಒಟ್ಟು 47ಕ್ಕೂ ಅಧಿಕ ಮಿಡಿ ಬಸ್ಗಳನ್ನು ಖರೀದಿಸಿದೆ. ಈ ಬಸ್‌ಗಳ ಬಿಡಿ ಭಾಗಗಳ ಸಮಸ್ಯೆ ಕಂಡು ಬಂದಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿ ನಿರ್ವಹಣೆ ಮಾಡಿಕೊಡಬೇಕಿತ್ತು. ಆದರೆ, ಬಸ್‌ಗಳ ಸರಿಯಾದ ನಿರ್ವಹಣೆ ಮಾಡದೇ ಇರುವುದು ಇದಕ್ಕೆಲ್ಲ ಕಾರಣವಾಯ್ತಾ? ಎಂಬ ಅನುಮಾನ ವ್ಯಕ್ತವಾಗಿದೆ.