ಬೆಂಗಳೂರು: ಯಾವುದೇ ರೀತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ 70ಕ್ಕೂ ಹೆಚ್ಚು ಜನ ಪ್ರಯಾಣಿಕರನ್ನು ಕರೆದೊಯ್ದಿದ್ದ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಬಿಎಂಟಿಸಿ ಈ ಆದೇಶ ಹೊರಡಿಸಿದೆ.
70ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದಿದ್ದ ಬಿಎಂಟಿಸಿ ಚಾಲಕ, ನಿರ್ವಾಹಕ ಸಸ್ಪೆಂಡ್ - ಬೆಂಗಳೂರು ಬಿಎಂಟಿಸಿ ಲೇಟೆಸ್ಟ್ ನ್ಯೂಸ್
ಇಂದು ಬಿಎಂಟಿಸಿ ಬಸ್ವೊಂದರಲ್ಲಿ 70ಕ್ಕೂ ಅಧಿಕ ಜನರನ್ನು ಕರೆದೊಯ್ದಿದ್ದ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
BMTC
ಒಂದೇ ಬಸ್ನಲ್ಲಿ 70ಕ್ಕೂ ಹೆಚ್ಚು ಮಂದಿ ಪ್ರಯಾಣ: ಸಾಮಾಜಿಕ ಅಂತರ ಮರೆತ ಬಿಎಂಟಿಸಿ!
ಇಂದು ನಗರದಲ್ಲಿ 70ಕ್ಕೂ ಅಧಿಕ ಜನರನ್ನುಬಿಎಂಟಿಸಿ ಬಸ್ವೊಂದು ಮೆಜೆಸ್ಟಿಕ್ನಿಂದ ಯಲಹಂಕಕ್ಕೆ ಸಂಚಾರ ನಡೆಸಿತ್ತು. ಬಸ್ನಲ್ಲಿ ಯಾವುದೇ ಸಾಮಾಜಿಕ ಅಂರತವಾಗಲಿ, ಸ್ಯಾನಿಟೈಸರ್ ಆಗಲಿ ಇರಲಿಲ್ಲಿ. ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಜನರನ್ನು ಕುರಿ ಹಿಂಡಿನಂತೆ ತುಂಬಿಕೊಂಡು ಸಾಗಿದ್ದ ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಅಮಾನತು ಮಾಡಿ ಬಿಎಂಟಿಸಿಯಿಂದ ಆದೇಶ ಹೊರಡಿಸಲಾಗಿದೆ.