ಕರ್ನಾಟಕ

karnataka

ETV Bharat / state

ಬಿಎಂಟಿಸಿ ವಿದ್ಯಾರ್ಥಿ ಪಾಸ್.. 15ರ ಬದಲು ಇನ್ಮುಂದೆ 8 ಕೌಂಟರ್‌ನಲ್ಲಿ ಮಾತ್ರ ವಿತರಣೆ‌.. - Bangalore News

ಬಿಎಂಟಿಸಿ ವತಿಯಿಂದ ನೀಡಲ್ಪಡುವ ವಿದ್ಯಾರ್ಥಿ ಪಾಸ್​ಗಳು ಇನ್ಮುಂದೆ 15 ಕೌಂಟರ್ ಬದಲು 8ರಲ್ಲಿ ಮಾತ್ರ ವಿತರಣೆಯಾಗಲಿದೆ. ಹೆಚ್ಚಿನ ವಿದ್ಯಾರ್ಥಿಗಳು ಈಗಾಗಲೇ ಪಾಸ್ ಪಡೆದುಕೊಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಿಎಂಟಿಸಿ ವಿದ್ಯಾರ್ಥಿ ಪಾಸ್

By

Published : Sep 1, 2019, 4:42 PM IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವತಿಯಿಂದ ವಿತರಿಸುವ ವಿದ್ಯಾರ್ಥಿ ಪಾಸ್ ಇನ್ಮುಂದೆ 15ರ ಬದಲಾಗಿ ಕೇವಲ 8 ನಿಲ್ದಾಣಗಳಲ್ಲಿ ಮಾತ್ರ ವಿತರಣೆಯಾಗಲಿದೆ.

ಈಗಾಗಲೇ ಶೇ. 85 ರಷ್ಟು ವಿದ್ಯಾರ್ಥಿಗಳು ರಿಯಾಯಿತಿ ಪಾಸುಗಳನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಹೆಚ್ಚಿನ ವಿತರಣಾ ಕೌಂಟರ್‌ಗಳಲ್ಲಿ ದಿನವೊಂದಕ್ಕೆ 80-100 ಪಾಸುಗಳು ಮಾತ್ರ ವಿತರಣೆಯಾಗುತ್ತಿದೆ.‌ ಸೆಪ್ಟೆಂಬರ್ 3ರಿಂದ 15ರ ಬದಲಿಗೆ 8 ನಿಲ್ದಾಣಗಳಲ್ಲಿ ಮಾತ್ರ ವಿದ್ಯಾರ್ಥಿ ಪಾಸುಗಳನ್ನ ವಿತರಿಸಲು ಬಿಎಂಟಿಸಿ ನಿರ್ಧರಿಸಿದೆ.

ಇನ್ಮುಂದೆ 8 ಕೌಂಟರ್ ನಲ್ಲಿ ಮಾತ್ರ ಪಾಸ್ ವಿತರಣೆ‌..

ಇನ್ಮುಂದೆ ನಗರದ ಕೆಂಪೇಗೌಡ ಬಸ್‌ ನಿಲ್ದಾಣ, ಯಶವಂತಪುರ, ವಿಜಯನಗರ, ಕೆಂಗೇರಿ, ಬನಶಂಕರಿ, ‌ಶಾಂತಿನಗರ, ಯಲಹಂಕ ಉಪನಗರ, ಶಿವಾಜಿನಗರ‌ ಬಸ್‌ ನಿಲ್ದಾಣಗಳಲ್ಲಿ ಮಾತ್ರ ಪಾಸ್ ಸಿಗಲಿದೆ.

ABOUT THE AUTHOR

...view details