ಕರ್ನಾಟಕ

karnataka

ETV Bharat / state

ಬಸ್​ ಹತ್ತಲು ಮೆಜಸ್ಟಿಕ್​​ ನಿಲ್ದಾಣಕ್ಕೆ ಹೋಗ್ಬೇಕಿಲ್ಲ... ರೈಲ್ವೇ ಸ್ಟೇಷನ್​​ನಿಂದ್ಲೇ ಬಿಎಂಟಿಸಿ ಸೇವೆ ಆರಂಭ - ಬೆಂಗಳೂರು ಬಿಎಂಟಿಸಿ ಸುದ್ದಿ

ಮೆಜೆಸ್ಟಿಕ್, ರೈಲ್ವೇ ನಿಲ್ದಾಣದ ಗೇಟ್ 3 ರಿಂದ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್ ಆರಂಭವಾಗಿದ್ದು, ಬಿಎಂಟಿಸಿ ಅಧ್ಯಕ್ಷ ಎನ್.ಎಸ್ ನಂದೀಶ್ ರೆಡ್ಡಿ, ಸಂಸದ ಪಿ.ಸಿ ಮೋಹನ್, ಬಿಎಂಟಿಸಿ ಎಂಡಿ ಶಿಖಾ, ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

BMTC
ರೈಲ್ವೇ ನಿಲ್ದಾಣದಿಂದಲೇ ವಿವಿಧ ಭಾಗಗಳಿಗೆ ಬಿಎಂಟಿಸಿ ಸೇವೆ ಲಭ್ಯ.

By

Published : Dec 16, 2019, 7:06 PM IST

ಬೆಂಗಳೂರು: ಮೆಜೆಸ್ಟಿಕ್, ರೈಲ್ವೆ ನಿಲ್ದಾಣದ ಗೇಟ್ 3 ರಿಂದ ವಿವಿಧ ಭಾಗಗಳಿಗೆ ಬಿಎಂಟಿಸಿ ಬಸ್ ಆರಂಭವಾಗಿದ್ದು, ಬಿಎಂಟಿಸಿ ಅಧ್ಯಕ್ಷ ಎನ್.ಎಸ್ ನಂದೀಶ್ ರೆಡ್ಡಿ, ಸಂಸದ ಪಿ.ಸಿ ಮೋಹನ್, ಬಿಎಂಟಿಸಿ ಎಂಡಿ ಶಿಖಾ, ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.

ರೈಲ್ವೇ ನಿಲ್ದಾಣದಿಂದಲೇ ವಿವಿಧ ಭಾಗಗಳಿಗೆ ಬಿಎಂಟಿಸಿ ಸೇವೆ ಲಭ್ಯ.

ನಂತರ ಮಾತಾನಾಡಿದ ಅಧ್ಯಕ್ಷ ಎನ್.ಎಸ್ ನಂದೀಶ್ ರೆಡ್ಡಿ, ಬಿಜೆಪಿ ಸರ್ಕಾರ ಬಂದಾಗಿನಿಂದ ಬಿಎಂಟಿಸಿಗೆ ಹಲವಾರು ಯೋಜನೆಗಳನ್ನು ಮಾಡುತ್ತಿದೆ, ಪಿಸಿ ಮೋಹನ್ ಅವರ ಸೂಚನೆಯಂತೆ ಬಿಎಂಟಿಸಿಯನ್ನು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಮಾಡಿದ್ದೀವಿ ಎಂದರು.

ಮೊದಲನೇ ಹಂತವಾಗಿ ರೈಲ್ವೇ ನಿಲ್ದಾಣದಿಂದ 54 ಭಾಗಗಳಿಗೆ ಬಸ್ ಸೇವೆ ಕಲ್ಪಿಸಿದ್ದೇವೆ. ಕೆಆರ್ ಪುರಂ, ಹೊಸಕೋಟೆ, ಕಾಡುಗೋಡಿ, ಅತ್ತಿಬೆಲೆ, ಸರ್ಜಾಪುರ ರಸ್ತೆ, ಯಲಹಂಕ ಸೇರಿದಂತೆ ಹಲವು ಭಾಗಗಳಿಗೆ ನಿಯೋಜನೆ ಮಾಡಿದ್ದೇವೆ. ಎಲ್ಲಾ ಭಾಗಗಳಿಗೆ ದಿನಕ್ಕೆ 9 ಬಸ್ ಗಳನ್ನು ಪ್ರಾರಂಭ ಮಾಡಿದ್ದೇವೆ. ಈ ಯೋಜನೆಯಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಈ ಯೋಜನೆಯಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಆಗಲಿದ್ದು, ಜೊತೆಗೆ ಲಗೇಜ್ ಎತ್ತಿಕೊಂಡು ರೈಲ್ವೇ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಜನರು ಹೋಗಬೇಕಿತ್ತು..ಆದರೆ ಇನ್ಮುಂದೆ ರೈಲ್ವೇ ನಿಲ್ದಾಣದ ಬಳಿಯೇ ಬಸ್ ಸೇವೆ ಸಿಗುತ್ತದೆ.

ನಂತರ ಮಾತಾನಾಡಿದ ಸಂಸದ ಪಿ.ಸಿ‌ ಮೋಹನ್, ಲಾಸ್ಟ್ ಮೈಲ್ ಕನೆಕ್ಟಿವಿಟಿ ಅವಶ್ಯಕತೆ ಇತ್ತು. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಇಂತಹ ನೂತನ ಯೋಜನೆ ಅವಶ್ಯಕವಿತ್ತು, ಜನರು ಹೆಚ್ಚು ಹೆಚ್ಚು ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details