ಕರ್ನಾಟಕ

karnataka

ETV Bharat / state

ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 48 ಹೊಸ ಕೌಂಟರ್ - ಬಿಎಂಟಿಸಿ

ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಮಾಸಿಕ ಪಾಸುಗಳು ದೊರಕಲು ಅನುಕೂಲವಾಗುವಂತೆ ಬಿಎಂಟಿಸಿ ನೂತನವಾಗಿ 48 ಹೊಸ ಕೌಂಟರ್ ತೆರೆದಿದೆ.

BMTC
ಬಿಎಂಟಿಸಿ

By

Published : Feb 24, 2021, 7:53 PM IST

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿದ್ದು, ಮಾಸಿಕ ಪಾಸು ಪಡೆದ ಪ್ರಯಾಣಿಕರು ಅನಿಯಮಿತವಾಗಿ ಪ್ರಯಾಣಿಸಬಹುದಾಗಿರುತ್ತದೆ.

ಮಾರ್ಚ್​ ತಿಂಗಳ ಮಾಸಿಕ ಪಾಸುಗಳನ್ನು ಫೆಬ್ರವರಿ 25 ರಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಮಾಸಿಕ ಪಾಸುಗಳು ದೊರಕಲು ಅನುಕೂಲವಾಗುವಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬಸ್​ ಪಾಸ್​ ವಿತರಣಾ ಕೇಂದ್ರಗಳು

ಪ್ರಸ್ತುತ ಸಂಸ್ಥೆಯಲ್ಲಿ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳನ್ನು ಒಳಗೊಂಡಂತೆ 65 ಸ್ಥಳಗಳಲ್ಲಿ ಮಾಸಿಕ ಪಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. ಹಾಗೆಯೇ ಬೆಂಗಳೂರಿನ 17 ಸ್ಥಳಗಳಲ್ಲಿ ಖಾಸಗಿ ಏಜನ್ಸಿಗಳ ಮೂಲಕ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತಿದೆ.

ಬೆಂಗಳೂರು ಒನ್ ಎಲ್ಲಾ 200 ಕೇಂದ್ರಗಳಲ್ಲೂ ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತಿದೆ. ಹೊಸದಾಗಿ 48 ಸ್ಥಳಗಳಲ್ಲಿ ಪಾಸು ವಿತರಣಾ ಕೌಂಟರ್ ತೆರೆಯಲಾಗುತ್ತಿದೆ.
ಮಾಸಿಕ ಪಾಸಿನ ಕೌಂಟರ್‌ಗಳು ಲಭ್ಯವಿಲ್ಲದ 12 ಬಸ್ ನಿಲ್ದಾಣಗಳಲ್ಲಿ ಸಾರಥಿ ವಾಹನಗಳ ಮೂಲಕ ಫೆಬ್ರವರಿ-27,28, ಮತ್ತು ಮಾರ್ಚ್ 1, 2 ರಂದು ಮಾಸಿಕ ಪಾಸುಗಳನ್ನು ವಿತರಿಸಲಾಗುತ್ತದೆ.

ABOUT THE AUTHOR

...view details