ಕರ್ನಾಟಕ

karnataka

ETV Bharat / state

ಪ್ರಯಾಣಿಕರಿಗೆ ಇನ್ಮುಂದೆ ಅಂಗೈಯಲ್ಲೇ ಬಿಎಂಟಿಸಿ‌ ಬಸ್​​ನ ಎಲ್ಲ ಮಾಹಿತಿ - BMTC mobile app latest news

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ MY BMTC ಮೊಬೈಲ್​ ಆ್ಯಪ್​ ಬಿಡುಗಡೆ ಮಾಡಿದೆ.

BMTC
ಬಿಎಂಟಿಸಿ ಮೊಬೈಲ್​ ಆ್ಯಪ್​

By

Published : Dec 25, 2019, 6:38 PM IST

ಬೆಂಗಳೂರು: ಲೇಟ್ ಆದರೂ ಲೇಟಸ್ಟ್​​ ಆಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ MY BMTC ಮೊಬೈಲ್​ ಆ್ಯಪ್​ ಬಿಡುಗಡೆ ಮಾಡಿದೆ. ಆರಂಭಿಕವಾಗಿ ಸಂಸ್ಥೆಯು ಬೇಟಾ ಅವೃತ್ತಿಯ ಆ್ಯಪ್ ಬಿಡುಗಡೆ ಮಾಡಿದೆ. ಇದನ್ನ ನಿಹಾರ್ ತಕ್ಕರ್ ಎಂಬುವವರು, ಆ್ಯಂಡ್ರೈಡ್ ಪ್ಲಾಟ್ ಫಾರ್ಮಾನಲ್ಲಿ ಅಭಿವೃದ್ಧಿ ಮಾಡಿದ್ದಾರೆ.

ಬಿಎಂಟಿಸಿ ಮೊಬೈಲ್​ ಆ್ಯಪ್​ ಬಿಡುಗಡೆ

ಅಂದಹಾಗೇ, ಈ ಹೊಸ ಆ್ಯಪ್ ನಿಂದ ಸಾರ್ವಜನಿಕರು ಬಸ್ ಆಗಮನ, ಹೊರಡುವ ಅಂದಾಜು ಸಮಯವನ್ನ ತಿಳಿಯಬಹುದಾಗಿದೆ. ಪ್ರಯಾಣಿಕರು ತಮ್ಮ ಗಮ್ಯ ಸ್ಥಾನದಿಂದ ಪ್ರಯಾಣಿಸಲು ಆಪ್ ಅನುಕೂಲವಾಗಲಿದೆ. ಆ್ಯಪ್ ನಲ್ಲಿ ಹತ್ತಿರದ ಬಸ್ ನಿಲ್ದಾಣ, ನಿಲುಗಡೆ ಎಲ್ಲಿ, ಬಸ್​​ ಸಂಚರಿಸುವ ವಾಹನಗಳ ಮಾಹಿತಿ ಪಡೆಯಬಹುದು. ಮಾರ್ಗ ಸಂಖ್ಯೆ ಆಧಾರಿತ ಬಸ್​​ ಗಳ ಹುಡುಕುವಿಕೆ, ನೆಚ್ಚಿನ ಆಯ್ಕೆ ಹೀಗೆ ಹಲವು ಸೌಲಭ್ಯಗಳನ್ನು ಪ್ರಯಾಣಿಕರು ಪಡೆಯಬಹುದಾಗಿದೆ.

ಅಂದಹಾಗೇ, MY BMTC APP ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಈ ಹೊಸ ಆಪ್ ಅನ್ನು ಡೌನ್ ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಂಡು ಉಪಯೋಗಿಸಬಹುದು. ಒಟ್ಟಿನಲ್ಲಿ ಕೈಯಲ್ಲಿ ಮೊಬೈಲ್​ವೊಂದು ಇದ್ದರೆ ಸಾಕು, ಬಿಎಂಟಿಸಿಯ ಆಗು- ಹೋಗುಗಳನ್ನ ತಿಳಿಯಬಹುದು.

ABOUT THE AUTHOR

...view details