ಕರ್ನಾಟಕ

karnataka

ETV Bharat / state

ಬಿಎಂಟಿಸಿ- ಕೆಎಸ್ ಆರ್‌ಟಿಸಿಯಲ್ಲಿ ರಾಜ್ಯೋತ್ಸವದ ಸಂಭ್ರಮ : ಗಮನ ಸೆಳೆದ ಪ್ರತ್ಯೇಕ ಪಥದ ಸ್ತಬ್ಧ ಚಿತ್ರ - ರಾಜ್ಯೋತ್ಸವ ಆಚರಿಸಿದ ಬಿಎಂಟಿಸಿ ಕೆಎಸ್​ಆರ್​ಟಿಸಿ ಸಂಸ್ಥೆಗಳು

ಸಿಲಿಕಾನ್ ಸಿಟಿಯಲ್ಲಿಯೂ ಕನ್ನಡದ ಹಬ್ಬ ಕಳೆಗಟ್ಟಿದ್ದು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ 64 ನೇ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು.‌

ಬಿಎಂಟಿಸಿ- ಕೆಎಸ್ ಆರ್‌ಟಿಸಿಯಲ್ಲಿ ರಾಜ್ಯೋತ್ಸವದ ಸಂಭ್ರಮ

By

Published : Nov 2, 2019, 5:13 AM IST

ಬೆಂಗಳೂರು : ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ 64ನೇ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು.‌ ಈ ಸಂದರ್ಭದಲ್ಲಿ ಬಿಎಂಟಿಸಿಯ ಬಸ್ ಪ್ರತ್ಯೇಕ ಪಥದ ಬಗೆಗಿನ ಸ್ತಬ್ಧಚಿತ್ರವನ್ನು ಉದ್ಘಾಟಿಸಲಾಯಿತು.

ಬಿಎಂಟಿಸಿ- ಕೆಎಸ್ ಆರ್‌ಟಿಸಿಯಲ್ಲಿ ರಾಜ್ಯೋತ್ಸವದ ಸಂಭ್ರಮ

ಇನ್ನು ಅತೀ ಹೆಚ್ಚು ಅಂಕ ಪಡೆದ ಸಂಸ್ಥೆಯ ಸಿಬ್ಬಂದಿ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬಸ್ಸುಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿದ್ದ 5000 ಕ್ಕೂ ಅಧಿಕ ಪ್ರಯಾಣಿಕರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಪುಸ್ತಕಗಳನ್ನು ವಿತರಿಸಲಾಯಿತು. ಎಲ್ಲಾ 45 ಘಟಕಗಳಲ್ಲಿ ಕನ್ನಡ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಇತ್ತ ಕೆಎಸ್ಆರ್​ಟಿಸಿ ಕೇಂದ್ರ ಕಚೇರಿಯಲ್ಲಿ ನಾಡ ದೇವತೆ ಭುವನೇಶ್ವರಿಗೆ ಪುಷ್ಪ ನಮನ ಅರ್ಪಿಸುವ ಮೂಲಕ ರಾಜ್ಯೋತ್ಸವ ಆಚರಿಸಿದರು.

For All Latest Updates

TAGGED:

ABOUT THE AUTHOR

...view details