ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಬಿಎಂಟಿಸಿ ಎಲೆಕ್ಟ್ರಿಕ್​​ ಬಸ್​​ಗಳು! - ಬಿಎಂಟಿಸಿ ಎಲೆಕ್ಟ್ರಿಕ್ ಬಸ್​

ಉದ್ಯಾನ ನಗರೀಯಲ್ಲಿ ಶೀಘ್ರದಲ್ಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​​ಗಳು ರಸ್ತೆಗಿಳಿಯಲಿವೆ.

BMTC Electric Bus will be on the road soon
ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್

By

Published : Dec 23, 2019, 11:44 PM IST

ಬೆಂಗಳೂರು: ಉದ್ಯಾನನಗರಿಯಲ್ಲಿ ಶೀಘ್ರದಲ್ಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​​ಗಳು ರಸ್ತೆಗಿಳಿಯಲಿವೆ.

ಬಿಎಂಟಿಸಿ ಬಸ್ ರಸ್ತೆಗಿಳಿದರೆ ಸಾಕು ಹಿಂದೆ ಹೋದವರಿಗೆ ಹೊಗೆ ತಪ್ಪಿದ್ದಲ್ಲ. ಆದರೆ ಇನ್ನು ಮುಂದೆ ಇಂತಹ ಕಿರಿಕಿರಿ ಅನುಭವಿಸಬೇಕಿಲ್ಲ. ಯಾಕೆಂದರೆ, ಬಿಎಂಟಿಸಿ ಎಲೆಕ್ಟ್ರಿಕ್ ಬಸ್​​ಗಳಿಗೆ‌ ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿ ಇದ್ದು, ಸುಮಾರು 300 ಬಸ್​​ಗಳು ರಸ್ತೆಗಿಳಿಯಲಿವೆ.

ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​​ಗಳು!

ಅಂದಹಾಗೆ ಈ ಹಿಂದೆ 80 ಬಸ್​​ಗಳ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ಭ್ರಷ್ಟಾಚಾರ ಆರೋಪದ ಅಡಿ ಟೆಂಡರ್ ರದ್ದಾಗಿತ್ತು.‌‌ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್​​ಮಾಲ್​​ ನಡೆದಿದೆ ಅಂತಾ ಹಿಂದಿನ ಸಾರಿಗೆ ಸಚಿವರು ಆರೋಪಿಸಿದ್ದರು. ಹೀಗಾಗಿ ಟೆಂಡರ್ ರದ್ದಾಗಿತ್ತು. ಇದೀಗ 300 ಬಸ್ ಖರೀದಿಗೆ ಮುಂದಾಗಿದ್ದು, ಶೀಘ್ರದಲ್ಲೇ ಟೆಂಡರ್ ಮುಗಿಸಿ ಬಸ್​​ಗಳನ್ನು ರಸ್ತೆಗಿಳಿಸೋದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ತಿಳಿಸಿದ್ದಾರೆ‌‌.‌

ಲೋಕಲ್ ಬಸ್​​ಗಳಿಗೆ ಡೀಸೆಲ್ ಹಾಕೋದಕ್ಕೆ ಆಗೋದಿಲ್ಲ ಮತ್ತು ಪರಿಸರ ಹಾನಿ ಎಂಬ ಕಾರಣಕ್ಕೆ ಬಿಎಂಟಿಸಿ ಈಗ ಎಲೆಕ್ಟ್ರಿಕ್ ಬಸ್​​ಗಳತ್ತ ಮುಖ ಮಾಡಿದೆ. ಇದು ಎಷ್ಟರ ಮಟ್ಟಿಗೆ ವರ್ಕ್​ಔಟ್ ಆಗುತ್ತೆ ಕಾದು ನೋಡಬೇಕು.

ABOUT THE AUTHOR

...view details