ಕರ್ನಾಟಕ

karnataka

ETV Bharat / state

ಯಲಹಂಕ ನಿಲ್ದಾಣದಲ್ಲಿ ಗುದ್ದಿದ ಬಿಎಂಟಿಸಿ ಬಸ್​ : ಕಂಡಕ್ಟರ್​ ಸ್ಥಳದಲ್ಲೇ ಸಾವು - ಈಟಿವಿ ಭಾರತ ಕನ್ನಡ

ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಮೃತಪಟ್ಟಿರುವ ಘಟನೆ ಯಲಹಂಕ ನಾಲ್ಕನೇ ಹಂತದ ಬಸ್ ನಿಲ್ದಾಣದಲ್ಲಿ ನಡೆದಿದೆ.

bmtc-conductor-died-after-bus-rammed-in-yalahanka-bus-stand
ಯಲಹಂಕ ನಿಲ್ದಾಣದಲ್ಲಿ ಕಂಡಕ್ಟರ್​ಗೆ ಗುದ್ದಿದ ಬಿಎಂಟಿಸಿ ಬಸ್​ : ಸ್ಥಳದಲ್ಲೇ ಸಾವು

By

Published : May 9, 2023, 7:41 PM IST

ಬೆಂಗಳೂರು :ನಗರದಲ್ಲಿ ಭೀಕರ ಘಟನೆ ನಡೆದಿದೆ. ಬಿಎಂಟಿಸಿ ಬಸ್​​ ಗುದ್ದಿದ ಪರಿಣಾಮ ನಿರ್ವಾಹಕರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಯಲಹಂಕ ನಾಲ್ಕನೇ ಹಂತದ ಬಸ್ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಇದೇ ವೇಳೆ ಬಸ್​ ಗೋಡೆಗೆ ಗುದ್ದಿದ್ದು, ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಿರ್ವಾಹಕ ಸೋಮಪ್ಪ ಎಂಬವರೇ ಮೃತರು.

ಇಂದು‌ ಬಸ್ ನಿಲ್ದಾಣದಲ್ಲಿದ್ದಾಗ ಬಸ್ ನಿರ್ವಾಹಕ ಸೋಮಪ್ಪ, ಟಿಕೆಟ್ ಹಣ ಸಂಗ್ರಹದ ಲೆಕ್ಕ ನೀಡಿ ವಾಪಸ್ ಬಸ್ ಬಳಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಬಸ್​ ಚಾಲನೆಯಲ್ಲಿತ್ತು. ಆಗ ​ಚಾಲಕ ಬ್ರೇಕ್ ಒತ್ತುವ ಬದಲು ಕ್ಲಚ್ ಒತ್ತಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಬಸ್ ಮುಂದಕ್ಕೆ ಚಲಿಸಿದೆ. ಇದರ ಪರಿಣಾಮ ಮುಂದೆ ಬರುತ್ತಿದ್ದ ಸೋಮಪ್ಪನ ಮೇಲೆ ಬಸ್ ಹರಿದಿದೆ. ಅಪಘಾತದ ರಭಸಕ್ಕೆ ಮುಂದಿದ್ದ ಗೋಡೆ ಮಧ್ಯೆ ಸೋಮಪ್ಪ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಾಲಕ ಘಟನೆ ಬಳಿಕ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ :ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಸೇತುವೆಯಿಂದ ಬಿದ್ದ ಬಸ್​.. 15 ಮಂದಿ ದುರ್ಮರಣ

ABOUT THE AUTHOR

...view details