ಕರ್ನಾಟಕ

karnataka

ETV Bharat / state

ಟಿಕೆಟ್‌ರಹಿತ, ಮಹಿಳೆಯರ ಸೀಟ್​ನಲ್ಲಿ ಪ್ರಯಾಣಿಸಿದ ಪುರುಷರಿಗೆ ಬಿಎಂಟಿಸಿ ದಂಡ - etv bharat kannada

ಮಹಿಳೆಯರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 119 ಪುರುಷ ಪ್ರಯಾಣಿಕರಿಂದ ಬಿಎಂಟಿಸಿ ದಂಡ ವಸೂಲಿ ಮಾಡಿದೆ.

bmtc-collects-fine-from-ticketless-travelers
ಟಿಕೆಟ್​ ರಹಿತ, ಮಹಿಳಾ ಮೀಸಲು ಸೀಟ್​ನಲ್ಲಿ ಪ್ರಯಾಣಿಸಿದವರಿಗೆ ಬಿಎಂಟಿಸಿ ದಂಡ

By

Published : Sep 22, 2022, 7:02 AM IST

Updated : Sep 22, 2022, 8:58 AM IST

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡಿದ 2,625 ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ.

ಆಗಸ್ಟ್ ತಿಂಗಳಲ್ಲಿ ಒಟ್ಟು 18,972 ಟ್ರಿಪ್‌ಗಳನ್ನು ತಪಾಸಣೆ ಮಾಡಲಾಗಿದೆ. ಅದರಲ್ಲಿ 2,625 ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 4,50,270 ರೂಪಾಯಿ ದಂಡ ವಸೂಲಿಯಾಗಿದೆ. ಈ ಸಂಬಂಧ 1,430 ಪ್ರಕರಣಗಳನ್ನು ದಾಖಲಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್​​ ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ವಿಚಕ್ಷಣಾ ತಂಡಗಳು ಪತ್ತೆ ಹಚ್ಚಿವೆ. ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆ ತಡೆಗಟ್ಟಲು ನಗರದಾದ್ಯಂತ ಸಂಚರಿಸುವ ವಾಹನಗಳ ತಪಾಸಣೆ ನಡೆದಿದೆ.

ಪುರುಷ ಪ್ರಯಾಣಿಕರಿಗೆ ದಂಡ:ಮಹಿಳೆಯರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 119 ಪುರುಷ ಪ್ರಯಾಣಿಕರಿಂದ ಒಟ್ಟು 11,900 ರೂ. ದಂಡ ವಸೂಲಿ ಮಾಡಲಾಗಿದೆ. ಒಟ್ಟಾರೆ, ಆಗಸ್ಟ್ ತಿಂಗಳಲ್ಲಿ 2,744 ಪ್ರಯಾಣಿಕರಿಂದ ಒಟ್ಟು 4,62,170 ರೂ. ದಂಡ ವಸೂಲಿ ಆಗಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಇನ್ಮುಂದೆ ಬಿಎಂಟಿಸಿ ಆಗಲಿದೆ ಕಂಡಕ್ಟರ್ ಲೆಸ್; ಸಂಕಷ್ಟದಿಂದ ಪಾರಾಗಲು ಹೊಸ ಪ್ಲಾನ್!

Last Updated : Sep 22, 2022, 8:58 AM IST

ABOUT THE AUTHOR

...view details