ಕರ್ನಾಟಕ

karnataka

ETV Bharat / state

ಟಿಕೆಟ್ ರಹಿತ ಪ್ರಯಾಣ: 2,613 ಬಿಎಂಟಿಸಿ ಪ್ರಯಾಣಿಕರ ಮೇಲೆ ದಂಡ - ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ದಂಡ ಸಂಗ್ರಹ

ಟಿಕೆಟ್ ರಹಿತವಾಗಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಪ್ರಯಾಣಿಕರನ್ನು ಪತ್ತೆ ಹಚ್ಚಿ ನಾಲ್ಕು ಲಕ್ಷಕ್ಕೂ ಅಧಿಕ ಮೊತ್ತದ ದಂಡ ವಸೂಲಿ ಮಾಡಲಾಗಿದೆ.

bmtc-collected-fine-from-passengers-who-travelled-without-ticket
ಟಿಕೆಟ್ ರಹಿತ ಪ್ರಯಾಣ; 2,613 ಬಿಎಂಟಿಸಿ ಪ್ರಯಾಣಿಕರ ಮೇಲೆ ದಂಡ

By

Published : Jul 9, 2022, 9:35 PM IST

ಬೆಂಗಳೂರು: ಟಿಕೆಟ್ ರಹಿತವಾಗಿ ಬಿಎಂಟಿಸಿ ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದ 2,613 ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಲಾಗಿದೆ. ಜೂನ್ ತಿಂಗಳಲ್ಲಿ ಒಟ್ಟು 22,549 ಟ್ರಿಪ್‌ಗಳನ್ನು ತಪಾಸಣೆ ಮಾಡಲಾಗಿದ್ದು, 2,613 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ.4,27,620 ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1,268 ಪ್ರಕರಣಗಳನ್ನು ದಾಖಲಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್​​ ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ಬಿಎಂಟಿಸಿಯ ವಿಚಕ್ಷಣಾ ತಂಡಗಳು ತಪಾಸಣೆ ಮಾಡಿದ್ದವು.

ಈ ಸಂದರ್ಭಗಳಲ್ಲಿ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 236 ಪುರುಷ ಪ್ರಯಾಣಿಕರಿಂದ ಒಟ್ಟು ರೂ.13,800ನ್ನು ದಂಡ ವಿಧಿಸಲಾಗಿದೆ. ಆ ಮೂಲಕ ಒಟ್ಟಾರೆಯಾಗಿ ಜೂನ್ ತಿಂಗಳಲ್ಲಿ 2,751 ಪ್ರಯಾಣಿಕರಿಂದ ಒಟ್ಟು 4,41,420 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ :ಶಿವಮೊಗ್ಗ: 24 ಗಂಟೆಗಳಲ್ಲಿ 163.40 ಮಿಮಿ ಮಳೆ, ಬಹುತೇಕ ಜಲಾಶಯಗಳು ಭರ್ತಿ

ABOUT THE AUTHOR

...view details