ಕರ್ನಾಟಕ

karnataka

ETV Bharat / state

ಬೈಕ್​​​ಗೆ ಬಿಎಂಟಿಸಿ ಬಸ್ ಡಿಕ್ಕಿ: ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಹೆಡ್​ ​ಕಾನ್ಸ್​​ಟೇಬಲ್ ಬಲಿ - ಪೊಲೀಸ್ ಸಾವು

ಅಪಘಾತದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದು ಹೆಡ್‌ ಕಾನ್ಸ್‌ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ‌ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Head Cons Table at City Market Police Station Ramachari
ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ಹೆಡ್​​ಕಾನ್ಸ್​​ಟೇಬಲ್ ಬಲಿ

By

Published : Mar 4, 2021, 6:31 PM IST

ಬೆಂಗಳೂರು: ಬೈಕ್​​​ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ‌ ಸ್ಥಳದಲ್ಲೇ‌ ಪೊಲೀಸ್​ ಹೆಡ್​​​​ಕಾನ್ಸ್​ಟೇಬಲ್​​ ಬಲಿಯಾಗಿರುವ ದುರ್ಘಟನೆ ಬ್ಯಾಡರಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್​​ ರಾಮಾಚಾರಿ (47) ಸಾವನ್ನಪ್ಪಿದ‌ ದುರ್ದೈವಿ.‌ ಇವರು ರಾತ್ರಿ ಪಾಳಿ ಮುಗಿಸಿಕೊಂಡು ಇಂದು ಮಧ್ಯಾಹ್ನ‌ ಮಾಗಡಿ ರೋಡ್​​ನಲ್ಲಿ ಮನೆಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಿಎಂಟಿಸಿ ಬಸ್​​​ ಡಿಕ್ಕಿ ಹೊಡೆದಿದೆ.

ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್​​ಟೇಬಲ್​​ ರಾಮಾಚಾರಿ

ಅಪಘಾತ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಚಲಿಸುತ್ತಿದ್ದ ಮಾರುತಿ ವ್ಯಾನ್​ಗೆ ಆಕಸ್ಮಿಕ ಬೆಂಕಿ: ಕಾರು ಸುಟ್ಟು ಭಸ್ಮ

ABOUT THE AUTHOR

...view details