ಕರ್ನಾಟಕ

karnataka

ETV Bharat / state

ಫ್ಲೈ ಓವರ್​ನಿಂದ ಕೆಳಗೆ ಬಿದ್ದ ಬಿಎಂಟಿಸಿ ‌ಬಸ್: 8 ಜನರಿಗೆ ಗಾಯ, ಡ್ರೈವರ್ ಸ್ಥಿತಿ ಗಂಭೀರ - ಡ್ರೈವರ್ ಗಂಭೀರ

ಬೆಂಗಳೂರಲ್ಲಿ ಫ್ಲೈ ಓವರ್​ನಿಂದ ಕೆಳಗೆ ಬಿದ್ದ ಬಿಎಂಟಿ ಬಸ್- ಓವರ್​ಟೇಕ್ ಭರದಲ್ಲಿ ಅವಘಡ- ಡ್ರೈವರ್ ಸ್ಥಿತಿ ಗಂಭೀರ, 8 ಮಂದಿಗೆ ಗಾಯ- ಘಟನಾ ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಪಲ್ಟಿಯಾಗಿರುವ ಬಿಎಂಟಿಸಿ‌ ಬಸ್

By

Published : Mar 27, 2019, 12:28 PM IST

ಬೆಂಗಳೂರು:ಫ್ಲೈ ಓವರ್ ಹತ್ತುವಾಗ ಬಿಎಂಟಿಸಿ‌ ಬಸ್ ಪಲ್ಟಿಯಾಗಿರುವ ಘಟನೆ ನಗರದ ರಾಜಾಜಿನಗರದ 1 ನೇ‌ ಬ್ಲಾಕ್​ನಲ್ಲಿ ನಡೆದಿದೆ.

ಪಲ್ಟಿಯಾಗಿರುವ ಬಿಎಂಟಿಸಿ‌ ಬಸ್

ಫ್ಲೈ ಓವರ್ ಬಳಿ ಬಿಎಂಟಿಸಿ ಹತ್ತುವಾಗ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿದೆ. ಘಟನೆ ಪರಿಣಾಮ ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಬಸ್​ನಲ್ಲಿ 25 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ 8 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಅಲ್ಲಿನ ಪೋರ್ಟಿಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶಿಫ್ಟ್ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಸ್ಥಳೀಯ ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ಬಸ್ಸು ಪೈಪೋಟಿಗೆ ಬಿದ್ದು ಈ ರೀತಿಯಾಗಿದೆಯಂತೆ.

ಘಟನೆ ಬೆಳಕಿಗೆ ಬರುತ್ತಿದ್ದ ಹಾಗೆ ಶಾಸಕ ಗೋಪಲಯ್ಯ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹಾಗೆ ರಾಜಾಜಿನಗರ ಮಾರ್ಗವಾಗಿ ಕಾವಲ್ ಬೈರಸಂದ್ರ ಕಡೆ ಬಸ್ಸು ತೆರಳ್ತಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ಸದ್ಯ ಮಾಹಿತಿ ಇದೆ. ಹಾಗಾಗಿ ಪೊಲಿಸರು ಸಂಪೂರ್ಣ ತನಿಖೆಯಲ್ಲಿ ತೊಡಗಿದ್ದಾರೆ

ABOUT THE AUTHOR

...view details