ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬಿಎಂಟಿಸಿಯು ಬಲಗೈ ಸ್ವಾಧೀನ ಕಳೆದು ಕೊಂಡಿರುವ ಸಿಬ್ಬಂದಿಯಿಂದ ಬಸ್ ಚಾಲನೆ ಮಾಡಿಸಿದೆ.
ಮುಷ್ಕರದ ನಡುವೆ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಬಿಎಂಟಿಸಿ ನಿಗಮ ಹೊಸ ಹೊಸ ಪ್ರಯೋಗಗಳನ್ನ ಮಾಡುತ್ತಿದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಖಾಸಗಿ ಬಸ್ ಗಳನ್ನು ಓಡಿಸಲು ಅವಕಾಶ ಕೊಟ್ಟಿದೆಯಾದರೂ, ನಿಗಮದ ಬಸ್ಗಳಂತೆ ಎಲ್ಲಾ ಕಡೆ ಓಡಾಟಕ್ಕೆ ಆಗುತ್ತಿಲ್ಲ. ಚಾಲಕರು ಮತ್ತು ನಿರ್ವಾಹಕರು ಕೆಲಸಕ್ಕೆ ಗೈರಾದ ಕಾರಣ, ಇದೀಗ ಬಲಗೈ ಸ್ವಾಧೀನ ಕಳೆದುಕೊಂಡಿರುವ ಸಿಬ್ಬಂದಿಯಿಂದ ಬಸ್ ಚಾಲನೆ ಮಾಡಿಸಿದೆ.