ಕರ್ನಾಟಕ

karnataka

ETV Bharat / state

ಬಿಎಂಟಿಸಿ ಬಸ್‌ಗಳಲ್ಲಿ ಇನ್ಮುಂದೆ ಲೌಡ್​​ ಸ್ಪೀಕರ್​​ ಹಾಕಿ ಹಾಡು ಕೇಳುವಂತಿಲ್ಲ.. - ಬೆಂಗಳೂರು

ಬಿಎಂಟಿಸಿ ಬಸ್‌ಗಳಲ್ಲಿ ಇನ್ಮುಂದೆ ಮೊಬೈಲ್​ ಫೋನ್​ಗಳಲ್ಲಿ ಲೌಡ್​​ ಸ್ಪೀಕರ್​​​ ಹಾಕಿ ಹಾಡು ಕೇಳುವುದಕ್ಕೆ ಬ್ರೇಕ್​ ಹಾಕಲಾಗಿದೆ.

ಬಿಎಂಟಿಸಿ

By

Published : Sep 20, 2019, 12:12 PM IST

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್‌ಗಳ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನ ಹಾಕುವುದು ತಕ್ಷಣದಿಂದಲೇ ನಿರ್ಬಂಧಿಸಿ ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.‌

ಬಿಎಂಟಿಸಿಯಲ್ಲಿ ಪ್ರತಿದಿನ ಸುಮಾರು 35.77 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ, ಕೆಲವರು ಕಿರಿಕಿರಿ ಆಗುವಂತೆ ಮೊಬೈಲ್​ನಲ್ಲಿ ಲೌಡ್ ಸ್ಪೀಕರ್ ಹಾಕಿ ಹಾಡುಗಳನ್ನು ಕೇಳುತ್ತಾರೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 94(I) (V)ರ ಪ್ರಕಾರ ಸಾರ್ವಜನಿಕ ಸಾರಿಗೆಗಳಾದ ಬಿಎಂಟಿಸಿ, ಕೆಎಸ್ಆರ್​ಟಿಸಿ ಮತ್ತು ಇಂಡಿಯನ್ ರೈಲ್ವೆಗಳಲ್ಲಿ, ಬೇರೆಯವರಿಗೆ ಕಿರಿಕಿರಿಯಾಗುವಂತೆ ಶಬ್ದ ಮಾಲಿನ್ಯ ಮಾಡುವಂತಿಲ್ಲ. ಇದರನ್ವಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದಾಗಿ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ.

ಆದ್ದರಿಂದ ಲೌಡ್ ಸ್ಪೀಕರ್‌ಗಳಲ್ಲಿ ಹಾಡುಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಜೊತೆಗೆ ಈ ಕುರಿತು ಕರ್ತವ್ಯ ನಿರತ ಚಾಲನಾ ಸಿಬ್ಬಂದಿ ಪ್ರಯಾಣಿಕರಿಗೆ ತಿಳುವಳಿಕೆ ನೀಡುವಂತೆ ತಿಳಿಸಲಾಗಿದೆ. ಈ ಮಾಹಿತಿಯನ್ನ ಪ್ರಯಾಣಿಕರಿಗೆ ತಲುಪಿಸಲು ಸಾರ್ವಜನಿಕ ಸಂಪರ್ಕಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಂಸ್ಥೆ ವಾಹನಗಳಲ್ಲಿ ಸ್ಟಿಕ್ಕರಿಂಗ್ ಮೂಲಕ ಮಾಹಿತಿಯನ್ನು ಪ್ರದರ್ಶಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ABOUT THE AUTHOR

...view details