ಬೆಂಗಳೂರು :ರಾಜಧಾನಿಯಲ್ಲಿ ಜನಸ್ನೇಹಿಯಾಗಿರುವ ನಮ್ಮ ಮೆಟ್ರೋ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರ ಮಧ್ಯೆ ಇದುವರೆಗೂ ಪೈಲಟ್ ಸಹಿತವಾಗಿ ಚಲಿಸುತ್ತಿದ್ದ ನಮ್ಮ ಮೆಟ್ರೋವನ್ನು ಇನ್ಮುಂದೆ ಪೈಲಟ್ ರಹಿತವಾಗಿ ಚಲಿಸಲು ಸಿದ್ಧತೆ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಸಂಚರಿಸುವ ಮೆಟ್ರೋ ರೈಲುಗಳಲ್ಲಿ ಈ ಹಿಂದೆ ಪೈಲಟ್ ಗಳು ಇರುತ್ತಿದ್ದರು. ಆದರೆ ಇನ್ನು ಮುಂದೆ ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ. ಈ ರೈಲುಗಳನ್ನು ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸುವ ವ್ಯವಸ್ಥೆಯೂ ಇರಲಿದೆ. ಮೆಟ್ರೋ ಚಾಲಕನ ಕೆಲ ತಪ್ಪುಗಳಿಂದ ನಗರದಲ್ಲಿ ಆಗಾಗ ಟ್ರೇನ್ ಗಳು ಸ್ಥಗಿತವಾಗುತ್ತಿದ್ದವು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.