ಕರ್ನಾಟಕ

karnataka

ETV Bharat / state

ಕರೆ ಮಾಡುವುದಾಗಿ ಮೊಬೈಲ್ ಪಡೆದವನಿಂದ ಬ್ಲ್ಯಾಕ್ ಮೇಲ್: ಆರೋಪಿ ಬಂಧನ

ಪವನ್​ ಎಂಬ ವ್ಯಕ್ತಿ ಕರೆ ಮಾಡುವುದಾಗಿ ಹೇಳಿ, ವ್ಯಕ್ತಿಯೊಬ್ಬರಿಂದ ಮೊಬೈಲ್​ ಪಡೆದು ಬಳಿಕ ಎಸ್ಕೇಪ್​ ಆಗಿದ್ದ. ನಂತರ ಆ ಮೊಬೈಲ್​ನಲ್ಲಿ ಇದ್ದ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್​ಮೇಲ್​ ಮಾಡುತ್ತಿದ್ದ ಎನ್ನಲಾಗ್ತಿದೆ. ಸದ್ಯ ಯಶವಂತಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯ ಬಂಧನ
ಆರೋಪಿಯ ಬಂಧನ

By

Published : Jan 3, 2023, 12:07 PM IST

ಬೆಂಗಳೂರು: ಅಪರಿಚಿತರು ಯಾರಾದರೂ ಕರೆ ಮಾಡಬೇಕು ಎಂದು ನಿಮ್ಮ ಮೊಬೈಲ್ ಫೋನ್ ಕೇಳಿದರೆ, ಕೊಡುವ ಮುನ್ನ ಸ್ವಲ್ಪ ಎಚ್ಚರ ಇರಲಿ. ಇಲ್ಲೊಬ್ಬ ವ್ಯಕ್ತಿ ಫೋನ್ ಮಾಡುವುದಾಗಿ ಹೇಳಿ ಮೊಬೈಲ್​ ಪಡೆದು, ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ಇದೀಗ ಯಶವಂತಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ‌.

ನೊಂದ ದೇವವ್ರತ್ ಸಿಂಗ್ ನೀಡಿದ ದೂರಿನ ಪ್ರತಿ

ಮೊಬೈಲ್​ ಪಡೆದು ಎಸ್ಕೇಪ್​​: ಪವನ್ ಬಂಧಿತ ಆರೋಪಿ. ಡಿಸೆಂಬರ್ 25ರಂದು ಮತ್ತಿಕೆರೆಯ ಬಳಿ ದೇವವ್ರತ್ ಸಿಂಗ್ ಎಂಬಾತನ ಬಳಿ ಬಂದಿದ್ದ ಆರೋಪಿ ಪವನ್ 'ನನ್ನ ಮೊಬೈಲ್ ಕೆಟ್ಟಿದೆ, ಒಂದು ಕರೆ ಮಾಡಬೇಕು' ಎಂದು ಹೇಳಿ ಮೊಬೈಲ್ ಪಡೆದಿದ್ದ. ಪವನ್ ಕೈಗೆ ಮೊಬೈಲ್ ಕೊಡುವ ಮುನ್ನ ದೇವವ್ರತ್ ಸಿಂಗ್ ಅನ್ ಲಾಕ್ ಮಾಡಿ ಕೊಟ್ಟಿದ್ದ. ಅನ್ ಲಾಕ್ ಪ್ಯಾಟರ್ನ್ ಗಮನಿಸಿದ್ದ ಆರೋಪಿ ಪವನ್, ಮೊಬೈಲ್ ಪಡೆದ ಕ್ಷಣಾರ್ಧದಲ್ಲೇ ತನ್ನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಾನೆ.

ಕರೆ ಮಾಡಿ ಹಣಕ್ಕೆ ಬೇಡಿಕೆ: ನಂತರ ಮೊಬೈಲ್​​ನಲ್ಲಿದ್ದ ದೇವವ್ರತ್ ಹಾಗೂ ಆತನ ಪ್ರೇಯಸಿ ಖಾಸಗಿ ಫೋಟೋಗಳನ್ನ ಗಮನಿಸಿದ್ದ. ದೇವವ್ರತ್ ಸಿಂಗ್ ಪ್ರೇಯಸಿಗೆ ಕರೆ ಮಾಡಿ 1 ಲಕ್ಷ ಹಣ ಕೊಡದಿದ್ದರೆ ಖಾಸಗಿ ಫೋಟೋಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಾಲದು ಎಂಬಂತೆ ದೇವವ್ರತ್ ಸಿಂಗ್ ತಾಯಿಗೂ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ.

ಇದನ್ನೂ ಓದಿ:ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಹಣ ಪೀಕುತ್ತಿದ್ದ ಸುಂದರಿ ಅಂದರ್

ನೊಂದ ದೇವವ್ರತ್ ಸಿಂಗ್ ಯಶವಂತಪುರ ಠಾಣೆಗೆ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ಕೈಗೊಂಡ ಇನ್​​ಸ್ಪೆಕ್ಟರ್ ಸುರೇಶ್ ನೇತೃತ್ವದ ತಂಡ ಹಣ ಕೊಡುವುದಾಗಿ ಕರೆಸಿ ಆರೋಪಿ ಪವನ್​​​​​ನನ್ನು ಬಂಧಿಸಿದೆ. ವಿಚಾರಣೆ ವೇಳೆ ಆರೋಪಿ ಪವನ್, ಸೈಯದ್ ನಿಯಾಜ್ ಎಂಬಾತನ ಜೊತೆ ಡ್ರಗ್ಸ್ ಮಾರಾಟ‌ದಲ್ಲಿ ತೊಡಗಿರುವುದು ಸಹ ಪತ್ತೆಯಾಗಿದೆ. ಪವನ್​​ನಿಂದ ಪಡೆದ ಮಾಹಿತಿ ಅನ್ವಯ ಸೈಯದ್ ನಿಯಾಜ್ ನನ್ನೂ ಬಂಧಿಸಲಾಗಿದೆ‌. ಬಂಧಿತನಿಂದ 3.45 ಲಕ್ಷ ಬೆಲೆಬಾಳುವ ಎಂಡಿಎಂಎ, 560 ಗ್ರಾಂ ಗಾಂಜಾ, ಮೊಬೈಲ್ ಫೋನ್, ಒಂದು ಕಾರ್, ಎಕ್ಸ್ಟೆಸಿ ಪೌಡರ್ ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details