ಕರ್ನಾಟಕ

karnataka

ETV Bharat / state

ಮೊದಲ ವಿಚ್ಛೇದನ... ಮತ್ತೊಬ್ಬನ ಪ್ರೀತಿಯ ಬಲೆಗೆ ಸಿಲುಕಿದ ಮಹಿಳೆಗೆ ಎದುರಾಯ್ತು ಆತಂಕ! - Blackmail by keeping private photos

ಪತಿಗೆ ವಿಚ್ಛೇದನ ನೀಡಿದ್ದ ಮಹಿಳೆಯೋರ್ವಳು ಯಾರಿಗೂ ತಿಳಿಯದ ಹಾಗೆ ಮರುಮದುವೆಯಾಗಿದ್ದು, ಇದೀಗ ಪೇಚಿಗೆ ಸಿಲುಕಿರುವ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.

Blackmail by keeping private photos of women....complaint against accused
ಖಾಸಗಿ ಫೋಟೋಗಳನ್ನ ಇಟ್ಟುಕೊಂಡು ಬ್ಲ್ಯಾಕ್​ಮೇಲ್.....ನೊಂದ ಯುವತಿಯಿಂದ ದೂರು

By

Published : Mar 20, 2020, 2:50 PM IST

Updated : Mar 20, 2020, 3:24 PM IST

ಬೆಂಗಳೂರು:ಮೊದಲ ಪತಿಗೆ ವಿಚ್ಛೇದನ ನೀಡಿ, ಯಾರಿಗೂ ತಿಳಿಯದ ಹಾಗೆ ಎರಡನೇ ಮದುವೆಯಾಗಿದ್ದ ಮಹಿಳೆಯೋರ್ವಳು ಇದೀಗ ಪೇಚಿಗೆ ಸಿಲುಕಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಬನಶಂಕರಿ ನಿವಾಸಿಯಾಗಿರುವ ಸಂತ್ರಸ್ತೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದರು. ಮದನ್ ಎಂಬಾತ ಮಹಿಳೆಗೆ ಪ್ರೀತಿಸುವಂತೆ ಹಿಂದೆ ಬಿದ್ದಾಗ ವಿಚ್ಛೇದನ ಪಡೆದಿದ್ದ ಮಹಿಳೆ ಮದನ್​ಗೆ ಒಪ್ಪಿಗೆ ಸೂಚಿದ್ದರು. ಮೊದ-ಮೊದಲು ಆತನನ್ನ ನಿರ್ಲಕ್ಷ್ಯಿಸಿದ್ರು, ಕೊನೆಗೆ ಆತನ ಪ್ರೀತಿಗೆ ಮರುಳಾಗಿ ಲಿವಿಂಗ್ ಟುಗೆದರ್(ಸಹಜೀವನ) ರಿಲೇಷನ್ ಶಿಪ್​ನಲ್ಲಿ ಮಹಿಳೆ ಹಾಗೂ ಆಕೆಯ ಮಗಳು ವಾಸವಿದ್ರು. ಬಳಿಕ ದೇವಸ್ಥಾನಕ್ಕೆ ತೆರಳಿ ಮದುವೆ ಮಾಡಿಕೊಂಡಿದ್ರು.

ಈ ವಿಚಾರ ಮದನ್ ಮನೆಯಲ್ಲಿ ತಿಳಿಯುತ್ತಿದ್ದಂತೆ ಆತನಿಗೆ ಬೇರೆ ಯುವತಿ ಜೊತೆ ಮದುವೆ ಮಾಡಲು ಪ್ಲಾನ್​ ಮಾಡಿದ್ದಾರೆ. ಇತ್ತ ಮದನ್ ಕೂಡಾ ಮಾತು ಬದಲಾಯಿಸಿದ್ದ. ನಾನು ನಿನ್ನ ಜೊತೆ ಬಾಳಬೇಕಾದರೆ 20 ಲಕ್ಷ ರೂಪಾಯಿ ಕೊಡುವಂತೆ ಟಾರ್ಚರ್ ಕೊಡುತ್ತಿದ್ದ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಖಾಸಗಿ ಫೋಟೋವನ್ನ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ. ಸದ್ಯ ಮಹಿಳೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Last Updated : Mar 20, 2020, 3:24 PM IST

ABOUT THE AUTHOR

...view details