ಬೆಂಗಳೂರು:ಸಚಿವ ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ಟೆಕ್ನಿಕಲ್ ಎವಿಡೆನ್ಸ್ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸಿಸಿಬಿ ಪೊಲೀಸರು ವಿಡಿಯೋ ರಾ ಫುಟೇಜ್ ಯಾವ ಡಿವೈಸ್ನಿಂದ ಮಾಡಲಾಗಿದೆ. ಯಾವುದರಿಂದ ಎಡಿಟ್ ಮಾಡಲಾಗಿದೆ ಎನ್ನುವುದರ ಕುರಿತು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಎಫ್.ಎಸ್.ಎಲ್ಗೆ ವಿಡಿಯೋ ಕಳಿಸಿರುವ ಸಿಸಿಬಿ ಪೊಲೀಸ್ ಸಿಬ್ಬಂದಿ ಆ ವಿಡಿಯೋ ಒರಿಜಿನಲ್ ಆಗಿದೆಯಾ? ಅಥವಾ ಮಾರ್ಫಿಂಗ್ ಮಾಡಿದ್ದಾರಾ ? ಎನ್ನುವುದರ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಯಲಯಕ್ಕೆ ರಿಪೋರ್ಟ್ ನೀಡಲು ಕೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.