ದೊಡ್ಡಬಳ್ಳಾಪುರ: ಸಮಾಧಿಯ ಬಳಿ ಅಪರಿಚಿತ ಯುವತಿಯ ಪೋಟೋ ಇಟ್ಟು, ಪೋಟೋ ಮುಂದೆ ರಂಗೋಲಿ ಬರೆದು ಪೂಜೆ ಮಾಡಿ ನಂತರ ವಶೀಕರಣ ಎಂದು ಬರೆಯಲಾಗಿದೆ. ಕಿಡಿಗೇಡಿಗಳ ಕೃತ್ಯ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
ಎರಡು ದಿನಗಳ ಹಿಂದೆ ಘಟನೆ ನಡೆದಿದ್ದು, ಗ್ರಾಮದ ಹೊರಭಾಗದ ಸ್ಮಶಾನದಲ್ಲಿ ಬಳಿ ಕುರಿಗಾಹಿಗಳು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಸಮಾಧಿಯ ಬಳಿ ಸುಂದರ ಯುವತಿಯ ಪೋಟೋ ಇಟ್ಟು, ಪೋಟೋದ ಮುಂದೆ ಎಲೆ ಆಡಿಕೆ ಹೂವು ಇಟ್ಟು ಪೂಜೆ ಮಾಡಲಾಗಿದೆ. ರಂಗೋಲಿಯಲ್ಲಿ ವಶೀಕರಣ ಎಂದು ಕನ್ನಡದಲ್ಲಿ ಬರೆಯಲಾಗಿದೆ. ವಾಮಾಚಾರ ಮಾಡುವ ಕಾರಣಕ್ಕೆ ಈ ಕೃತ್ಯವನ್ನ ಕಿಡಿಗೇಡಿಗಳು ನಡೆಸಿರುವ ಸಾಧ್ಯತೆ ಇದೆ.
ಗ್ರಾಮದ ಮಂಜುನಾಥ್ ಎಂಬುವರ ಮನೆಯಲ್ಲಿ ಮೂರು ತಿಂಗಳಲ್ಲಿ ಮೂವರು ಸಾವನ್ನಪ್ಪಿದರು, ಇತ್ತೀಚೆಗೆ ಮೃತಪಟ್ಟವರ ಸಮಾಧಿಯ ಬಳಿ ವಶೀಕರಣದ ಪೂಜೆ ಮಾಡಿರುವುದು ಮಂಜುನಾಥ್ ಕುಟುಂಬದವರ ಆತಂಕಕ್ಕೆ ಕಾರಣವಾಗಿದೆ. ಮಂಜುನಾಥ್ ಕುಟುಂಬದವರ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿರುವ ವ್ಯಕ್ತಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಮತ್ತು ಗ್ರಾಮದಲ್ಲಿ ಆಶಾಂತಿಯ ವಾತಾವರಣ ಸೃಷ್ಟಿ ಮಾಡಲು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಮಾಡಿರುತ್ತಾರೆ ಎಂಬ ಸಂಶಯ ಸಹ ಇದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಕಾವೇರಿ ಒಡಲಲ್ಲಿ ಹೆಣ್ಣಿನ ವಶೀಕರಣ?.. ಅನೈತಿಕ ಚಟುವಟಿಕೆ ತಾಣವಾಗ್ತಿದೆ ರಾಷ್ಟ್ರಪಿತನ ಅಸ್ಥಿ ವಿಸರ್ಜನಾ ಸ್ಥಳ!