ಬೆಂಗಳೂರು: ರಾಜ್ಯದಲ್ಲಿ ಇಲ್ಲಿಯವರೆಗೆ 2856 ಬ್ಲಾಕ್ ಫಂಗಸ್ ಪ್ರಕರಣ ಕಂಡು ಬಂದಿದೆ. ಈ ಪೈಕಿ 2316 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆಘಾತಕಾರಿ ವಿಚಾರ ಎಂದರೆ, ಬ್ಲಾಕ್ ಫಂಗಸ್ ದೃಢಪಟ್ಟವರಲ್ಲಿ ಗುಣಮುಖರಾದವರಿಗಿಂತ ಮೃತಪಟ್ಟವರ ಪ್ರಮಾಣವೇ ಹೆಚ್ಚಿದೆ. ಇಲ್ಲಿಯವರೆಗೆ 191 ಮಂದಿ ಗುಣಮುಖರಾಗಿದ್ದರೆ, 225 ಮಂದಿ ಮೃತಪಟ್ಟಿದ್ದಾರೆ. ಇನ್ನು 124 ಮಂದಿ ಚಿಕಿತ್ಸೆ ಪಡೆಯದೇ ಸ್ವಯಂಪ್ರೇರಿತರಾಗಿ ವೈದ್ಯಕೀಯ ಸಲಹೆ ಮೀರಿ ಡಿಸ್ಟಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
Black fungus: ಗುಣಮುಖರಿಗಿಂತ ಮೃತಪಟ್ಟವರ ಪ್ರಮಾಣವೇ ಹೆಚ್ಚು- ಇಲ್ಲಿಯವರೆಗೆ 2,856 ಕೇಸ್ - black fungus cases increased in state
ರಾಜ್ಯದಲ್ಲಿ ಬ್ಲಾಕ್ ಫಂಗಸ್ ದೃಢಪಟ್ಟವರಲ್ಲಿ ಗುಣಮುಖರಾದವರಿಗಿಂತ ಮೃತಪಟ್ಟವರ ಪ್ರಮಾಣವೇ ಹೆಚ್ಚಿದೆ. ಇಲ್ಲಿಯವರೆಗೆ 191 ಮಂದಿ ಗುಣಮುಖರಾಗಿದ್ದರೆ, 225 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲಾವಾರು ಬ್ಲಾಕ್ ಫಂಗಸ್ ಪ್ರಕರಣ:ಬಾಗಲಕೋಟೆಯಲ್ಲಿ 109, ಬಳ್ಳಾರಿಯಲ್ಲಿ 110, ಬೆಳಗಾವಿ 159, ಬೆಂ.ಗ್ರಾಮಾಂತರ 59, ಬೆಂಗಳೂರು ನಗರ 959, ಬೀದರ್ 28, ಚಾಮರಾಜನಗರ 10, ಚಿಕ್ಕಬಳ್ಳಾಪುರ 14, ಚಿಕ್ಕಮಗಳೂರು 4, ಚಿತ್ರದುರ್ಗ 126, ದ.ಕನ್ನಡ 80, ದಾವಣಗೆರೆ 87 , ಧಾರವಾಡ 229, ಗದಗ 45, ಹಾಸನ 37, ಹಾವೇರಿ 51, ಕಲಬುರಗಿ 168, ಕೊಡಗು 1, ಕೋಲಾರ 80, ಕೊಪ್ಪಳ 35, ಮಂಡ್ಯ 15, ಮೈಸೂರು 98, ರಾಯಚೂರು 98, ರಾಮನಗರ 7, ಶಿವಮೊಗ್ಗ 53, ತುಮಕೂರು 45, ಉಡುಪಿ 8, ಉ.ಕನ್ನಡ 8, ವಿಜಯಪುರ 130, ಯಾದಗಿರಿಯಲ್ಲಿ 3 ಪ್ರಕರಣ ದೃಢಪಟ್ಟಿದೆ.
ಓದಿ:ಬಿಎಸ್ವೈ ನಾಯಕತ್ವಕ್ಕ ಜೈ ಎಂದ ಅರುಣ್ ಸಿಂಗ್.. ಭಿನ್ನಮತೀಯರಿಗೆ ನೀಡಿದ್ರು ಬಿಗ್ ಶಾಕ್..!