ಬೆಂಗಳೂರು:ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹ ಮೂರ್ತಿ ಮನೆ ಮತ್ತು ಬೈಕ್ಗೆ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ಮನೆ ಮತ್ತು ಬೈಕ್ಗೆ ಬೆಂಕಿ.. ಅದೃಷ್ಟವಶಾತ್ ಮನೆಯವರು ಪಾರು!! - ದಾಸರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹ ಮೂರ್ತಿ
ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಗಿದ್ದು, ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಬಾಗಲಗುಂಟೆ ಬಳಿಯ ಶೆಟ್ಟಿಹಳ್ಳಿ ಬಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಮನೆ ಇದೆ. ನಿನ್ನೆ ರಾತ್ರಿ ಬಂದ ದುಷ್ಕರ್ಮಿಗಳು ಎದುರಿದ್ದ ಡಿಯೋ ಬೈಕ್ ಹಾಗೂ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮ ಡಿಯೋ ಬೈಕ್ ಹಾಗೂ ಮನೆ ಕಿಟಕಿ, ಬಾಗಿಲು ಸಂಪೂರ್ಣ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಗಿದ್ದು, ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ತನಿಖೆಯಲ್ಲಿ ಪ್ರೇಮ ಪ್ರಕರಣದ ಸುಳಿವು:ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ನರಸಿಂಹಮೂರ್ತಿಯವರಿಗೆ ಹೆಣ್ಣು ಮಕ್ಕಳಿದ್ದಾರೆ. ಮಗಳಿಗೆ ಬೆದರಿಕೆ ಹಾಕಲು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.ಸ್ಥಳದಲ್ಲಿ ಒಂದು ಪತ್ರ ಲಭ್ಯವಾಗಿದೆ. ಅದರಲ್ಲಿ ನರಸಿಂಹಮೂರ್ತಿ ಮಗಳಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ನೀನು ಸಂಬಂಧ ಇಟ್ಟುಕೊಳ್ಳುವಾಗ ಒಬ್ಬರ ಜೊತೆನೇ ಇಟ್ಕೋ, ಮೂರು ಜನರ ಜೊತೆ ಸಂಬಂಧ ಇಟ್ಕೊಂಡ್ರೆ ಸರಿ ಇರೋದಿಲ್ಲ ಎಂದು ಪತ್ರದಲ್ಲಿ ವಿಕೃತ ಮನಸ್ಥಿತಿಯಿಂದ ಬರೆದಿದ್ದಾರೆ. ಸದ್ಯ ಬಾಗಲೂರು ಪೊಲೀಸರು ಪತ್ರದ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ.
TAGGED:
ಪ್ರೇಮ ಪ್ರಕರಣದ ಸುಳಿವು