ಕರ್ನಾಟಕ

karnataka

ETV Bharat / state

ಸಿದ್ದು ಹೇಳಿಕೆಯನ್ನ ದೊಂಬರಾಟಕ್ಕೆ ಹೋಲಿಸಿದ ಬಿ.ಎಲ್ ಸಂತೋಷ್ - Bangalore DJ village riot

ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎರಡೂ ಕಡೆ ಜನ ಶಾಂತಿ ಕಾಪಾಡಬೇಕು ಎಂದಿರುವ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟೀಕಿಸಿದ್ದಾರೆ.

ಬಿ ಎಲ್ ಸಂತೋಷ್ ಟ್ವೀಟ್
ಬಿ ಎಲ್ ಸಂತೋಷ್ ಟ್ವೀಟ್

By

Published : Aug 12, 2020, 12:32 PM IST

ಬೆಂಗಳೂರು: ಗಲಭೆ ನಡೆದ ಡಿಜೆ ಹಳ್ಳಿಯಲ್ಲಿ ಎರಡೂ ಕಡೆಯ ಜನ ಶಾಂತಿ ಕಾಪಾಡಬೇಕು ಎಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಟೀಕಿಸಿದ್ದು, ಇದನ್ನೇ ಕನ್ನಡದಲ್ಲಿ ದೊಂಬರಾಟ ಎಂದು ಕರೆಯಲಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮೇಲೆ ಹಲ್ಲೆ ನಡೆಸಿದ ನಂತರವೂ ಎಐಸಿಸಿ, ಕೆಪಿಸಿಸಿ ನೀರವ ಮೌನವಾಗಿದೆ. ಶಾಸಕರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಇದು ಸುಲಿಗೆಕೋರರಿಗೆ ನೀಡುವ ಬೆಂಬಲವೇ? ಎಂದು ಬಿ.ಎಲ್ ಸಂತೋಷ್ ಟ್ವೀಟ್ ಮೂಲಕ ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿದ್ದಾರೆ.

ಇನ್ನು ಗಲಭೆಯಲ್ಲಿ ಹಿಂದೂ‌ ದೇವಾಲಯಕ್ಕೆ ಮುಸಲ್ಮಾನ ಯುವಕರು ಮಾನವ ಸರಪಳಿ ನಿರ್ಮಿಸಿ ರಕ್ಷಣೆ ನೀಡಿದ್ದಾರೆ. ಇದು ಬ್ಯೂಟಿ ಆಫ್ ಇಂಡಿಯಾ ಎಂದು ವಿಡಿಯೋ ಶೇರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಟಾಂಗ್ ನೀಡಿರುವ ಸಂತೋಷ್, ಪೊಲೀಸ್ ಠಾಣೆಯನ್ನು ದೋಚಿ 20 ಕ್ಕೂ ಹೆಚ್ಚು ವಾಹನಕ್ಕೆ ಬೆಂಕಿ ಹಚ್ಚಿ, ಶಾಸಕರ ನಿವಾಸಕ್ಕೂ ದಾಳಿ ಮಾಡಿದ್ದಾರೆ. ಮೂವರು ಗುಂಡಿಗೆ ಬಲಿಯಾಗಿದ್ದಾರೆ.140 ಜನರನ್ನು ಬಂಧಿಸಲಾಗಿದೆ. ವ್ಯವಸ್ಥಿತವಾಗಿ ದಾಳಿ ನಡೆಸಿ ಗಲಭೆ ನಡೆಸಿದ್ದು ಬ್ಯೂಟಿ ಆಫ್ ಇಂಡಿಯಾವೇ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details