ಬೆಂಗಳೂರು: ವಲಸಿಗರು ಸೇರಿದಂತೆ ಎಲ್ಲರಿಗೂ ಕಾಂಗ್ರೆಸ್ ಬಾಗಿಲು ಓಪನ್ ಇರುತ್ತದೆ. ಸೋನಿಯಾ, ಖರ್ಗೆ ಮೇಲೆ ನಂಬಿಕೆ ಇಟ್ಟು ಬರಬಹುದು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮುಕ್ತ ಆಹ್ವಾನ ನೀಡಿದ್ದಾರೆ.
ವಲಸಿಗರಿಗೆ ಡಿಕೆಶಿ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸುತ್ತ, "ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಮಾಡುತ್ತೇವೆ. ಪಕ್ಷದ ಸಿದ್ಧಾಂತ ನಂಬಿ ಬರುವವರಿಗೆ ಯಾವಾಗಲೂ ಬಾಗಿಲು ಓಪನ್ ಇರುತ್ತದೆ" ಎಂದು ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ನಾಯಕ ಅಂತ ಸೀಮಿತ ಮಾಡಬೇಡಿ. ಖರ್ಗೆಯವರ ಭುಜ ಎಷ್ಟು ಅಗಲವಾಗಿದೆಯೋ, ಅದಕ್ಕಿಂತ ದೊಡ್ಡ ಜವಾಬ್ದಾರಿ ಅವರಿಗೆ ನೀಡಲಾಗಿದೆ. ನಮ್ಮಲ್ಲಿ ಚುನಾವಣಾ ಸಮಿತಿ ಇದೆ. ಪ್ರಜಾಪ್ರಭುತ್ವ ಜೀವಂತವಿದೆ. ಕಾಂಗ್ರೆಸ್ ಡಿಸೆಂಬರ್ ನಲ್ಲಿ 50% ಟಿಕೆಟ್ ಘೋಷಣೆ ಮಾಡುವ ಚಿಂತನೆಯಲ್ಲಿದೆ ಎಂದು ತಿಳಿಸಿದರು.