ಬೆಂಗಳೂರು: ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿ ಪರ ಉತ್ತಮ ಫಲಿತಾಂಶ ಬರಲಿದೆ ಎಂದು ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೈದರಾಬಾದ್ನಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನಾವು ಉತ್ತಮವಾಗಿ ಅಲ್ಲಿ ಕೆಲಸ ಮಾಡಿದ್ದೆವು. ನೋಡೋಣ, ಅಧಿಕೃತ ಫಲಿತಾಂಶ ಬರಲಿ. ನಾನು ಅನೇಕ ಕಡೆ ಪ್ರಚಾರ ಮಾಡಿದ್ದೇನೆ. 10 ದಿನಗಳ ಕಾಲ ಅಲ್ಲಿ ಪಕ್ಷ ಸಂಘಟಿಸಿದ್ದೇವೆ. ಹಾಗಾಗಿ, ಉತ್ತಮ ಫಲಿತಾಂಶ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.