ಕರ್ನಾಟಕ

karnataka

ETV Bharat / state

ಉಪ ಚುನಾವಣೆಯ 13 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು: ಸಿಎಂ ಯಡಿಯೂರಪ್ಪ ವಿಶ್ವಾಸ - ಉಪ ಚುನಾವಣೆ ಲೆಟೆಸ್ಟ್ ನ್ಯೂಸ್

ಉಪ ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿದ್ದು, ಬಿಜೆಪಿ ಪಕ್ಷ 13 ಸ್ಥಾನ ಗೆಲ್ಲುವ ಮೂಲಕ ಮುಂದಿನ ಮೂರು ವರ್ಷ ಸುಭದ್ರ ಸರ್ಕಾರ ನೀಡುವ ವಿಶ್ವಾಸವನ್ನು ಸಿಎಂ ಯಡಿಯೂರಪ್ಪ ವ್ಯಕ್ತಪಡಿಸಿದರು.

ಯಡಿಯೂರಪ್ಪ
Yeddyurappa

By

Published : Dec 8, 2019, 2:06 PM IST

ಯಲಹಂಕ :ನಾಳೆ ಉಪ ಚುನಾವಣೆಯ ಎಣಿಕೆ ನಡೆಯಲ್ಲಿದ್ದು, ಬಿಜೆಪಿ ಪಕ್ಷ 13 ಸ್ಥಾನ ಗೆಲ್ಲುವ ಮೂಲಕ ಮುಂದಿನ ಮೂರು ವರ್ಷ ಸುಭದ್ರ ಸರ್ಕಾರ ನೀಡುವ ವಿಶ್ವಾಸವನ್ನು ಸಿಎಂ ಯಡಿಯೂರಪ್ಪ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ

ಯಲಹಂಕದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 400 ಕೋಟಿ ವೆಚ್ಚದ ಅಭಿವೃದ್ಧಿ ಕಾಮಾಗಾರಿಗಳನ್ನು ಉದ್ಘಾಟಿಸಿ ಮಾತನಾಡಡಿದ ಅವರು, ನಾಳೆ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ನಾನು ಸೇರಿದಂತೆ ನನ್ನ ಸಚಿವ ಸಂಪುಟದ ಸದಸ್ಯರು ಎರಡು ಬಾರಿ ಕ್ಷೇತ್ರಗಳನ್ನು ಸುತ್ತು ಬಂದಿದ್ದು, ನನ್ನ ಪ್ರಕಾರ ಆಕಸ್ಮಾತ್ ಗೆದ್ದರೆ ಒಂದು ಕಾಂಗ್ರೆಸ್​, ಒಂದು ಜೆಡಿಎಸ್ ಗೆಲ್ಲಬಹುದು. ನೂರಕ್ಕೆ ನೂರು 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದರು.

ಸುಮಾರು 20 ಸಾವಿರದಿಂದ 40 ಸಾವಿರ ಮತಗಳ ಅಂರತದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಇನ್ನೂ ಮೂರೂವರೆ ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಪ್ರತಿಪಕ್ಷಗಳು ಸಹಕಾರ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷ 150 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಸಿದರು.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದಗೌಡ, ಗೃಹ ಸಚಿವ ಬಸವರಾಜ್ ಬೊಮ್ಮಯಿ, ಮೇಯರ್ ಗೌತಮ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸಾಗರದಲ್ಲೂ ಗೆಲಿವಿನ ವಿಶ್ವಾಸ ವ್ಯಕ್ತಪಡಿಸಿದ ಬಿಎಸ್​​ವೈ:
ಶಿವಮೊಗ್ಗ ಜಿಲ್ಲೆಯ ಸಾಗರದ ಮಂಕಳಲೆ ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಾಳೆ ಬರುವ ಉಪ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷ 13 ಸ್ಥಾನ ಗೆಲ್ಲಲಿದೆ. ಅನರ್ಹ ಶಾಸಕರಿಗೆ ಬಹುಪಾಲು ಮಂತ್ರಿ ಸ್ಥಾನ ದೊರೆಯಲಿದೆ. ಇನ್ನು ಸಂಪುಟ ಪುನರ್​​ ರಚನೆ ಅಥವಾ ವಿಸ್ತರಣೆ ಮಾಡಬೇಕೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.

ABOUT THE AUTHOR

...view details