ಕರ್ನಾಟಕ

karnataka

ETV Bharat / state

ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ : ಹೆಚ್​ಡಿಕೆ ಆರೋಪ - ರಾಜರಾಜೇಶ್ವರಿನಗರ ಉಪಚುನಾವಣೆ

ಶಿರಾದಲ್ಲಿ ಕೆ.ಆರ್‌ ಪೇಟೆ ಫಲಿತಾಂಶ ಬರುತ್ತದೆಂದು ಅವರು ಅಂದುಕೊಂಡಿದ್ದಾರೆ. ಆದರೆ ಅದು ಉಲ್ಟಾ ಆಗಲಿದೆ. ಎರಡು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

HDK
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

By

Published : Oct 31, 2020, 4:23 PM IST

ಬೆಂಗಳೂರು:ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪೀಣ್ಯ ಕೈಗಾರಿಕೋದ್ಯಮಿಗಳ ಜೊತೆ ಇಂದು ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಜನ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಜನ ಹಣಕ್ಕೆ ಮಾರು ಹೋಗುವುದಿಲ್ಲ ಎಂದರು.

ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಎರಡು, ಮೂರು ಸ್ಥಾನಕ್ಕೆ ಸ್ಪರ್ಧೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಯಾವ ಆಧಾರದಲ್ಲಿ ಸಿಎಂ ಹಾಗೇ ಹೇಳ್ತಾರೆ‌. ಅವರಿಗೇನು ಕನಸು ಬಿದ್ದಿತ್ತಾ? ಎಂದು ತಿರುಗೇಟು ನೀಡಿದರು.

ಆರ್.ಆರ್.ನಗರದಲ್ಲಿ ಅಂಡರ್ ಕರೆಂಟ್ ಕೆಲಸ : ಆರ್. ಆರ್. ನಗರದಲ್ಲಿ ಅಂಡರ್ ಕರೆಂಟ್ ಕೆಲಸ ಮಾಡುತ್ತಿದೆ. ನಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಟ ದರ್ಶನ್ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಯಾವ ನಟರ ಪ್ರಚಾರದಿಂದ ಜನ ಮಾರು ಹೋಗುವುದಿಲ್ಲ. ಮತ ಹಾಕುವವರು ಮನೆಯಲ್ಲಿ ಇದ್ದಾರೆ. ಮತದಾನದ ದಿನ ಅವರು ಬಂದು ಯಾರಿಗೆ ಓಟ್ ಹಾಕಬೇಕು ಅಂತ ಅವರಿಗೆ ಗೊತ್ತಿದೆ ಎಂದರು.

ಮುನಿರತ್ನರನ್ನು ಮಂತ್ರಿ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ, ಸಿಎಂ 17 ಜನರನ್ನು ಮಂತ್ರಿ ಮಾಡ್ತೀ‌ನಿ ಅಂತ ಹಿಂದೆಯೇ ಹೇಳಿದ್ರು. ಆ ಮಾತು ಉಳಿಸಿಕೊಳ್ತಿದ್ದಾರೆ. ಈಗ ಮುನಿರತ್ನ ಅವರನ್ನು ಮಂತ್ರಿ ಮಾಡ್ತೀ‌ನಿ ಎಂದಿದ್ದಾರೆ. ಆದರೆ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ. ಉತ್ತರ ಕರ್ನಾಟಕದಲ್ಲಿ ಜನ ಸಾಯ್ತಿದ್ದಾರೆ. ಅವರನ್ನು ಉಳಿಸಿಕೊಳ್ಳೋ ಕೆಲಸ ಸಿಎಂ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ರಾಜರಾಜೇಶ್ವರಿನಗರ ಉಪಚುನಾವಣೆ ಹಿನ್ನೆಲೆ ಪೀಣ್ಯ ಕೈಗಾರಿಕೋದ್ಯಮಿಗಳ ಜೊತೆ ಕುಮಾರಸ್ವಾಮಿ ಅವರು ಸಭೆ ನಡೆಸಿದರು. ಪೀಣ್ಯ ಕೈಗಾರಿಕೋದ್ಯಮ ಸಂಘದಲ್ಲಿ ಅಧ್ಯಕ್ಷ ಪ್ರಕಾಶ್ ಮತ್ತಿತರರೊಂದಿಗೆ ಸಭೆ ನಡೆಸಿದ ಹೆಚ್​ಡಿಕೆ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣ ಮೂರ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ಪ್ರಕಾಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

ABOUT THE AUTHOR

...view details