ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಆಗಿದ್ದು ಜೆಡಿಎಸ್​,ಕಾಂಗ್ರೆಸ್​ ಮೈತ್ರಿಯಲ್ಲ, ಸಿದ್ದು,ಡಿಕೆಶಿ ಕದನ: ಬಿಜೆಪಿ ಟ್ವೀಟ್​

ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜ್ಯ ಕಾಂಗ್ರೆಸ್ ಘಟಕ ಕೆಪಿಸಿಸಿ ನಾಯಕತ್ವದ ಹೋರಾಟ ಒಂದು ಹಂತ ತಲುಪಿದೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದರೆ ಡಿಕೆ ಶಿವಕುಮಾರ್ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಮೈತ್ರಿಯ ವಿಚಾರವಲ್ಲ, ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ನಡೆಯುತ್ತಿರುವ ಕದನದ ಒಂದು ಭಾಗ ಅಷ್ಟೇ ಎಂದು ಬಿಜೆಪಿ ಟ್ವೀಟ್​ ಮಾಡಿದೆ.

BJP tweet
ಬಿಜೆಪಿ ಟ್ವೀಟ್​

By

Published : Feb 24, 2021, 6:56 PM IST

ಬೆಂಗಳೂರು: ಕಾಂಗ್ರೆಸ್​ನಲ್ಲಿ ನಾಯಕತ್ವಕ್ಕಾಗಿ ಹೋರಾಟ ನಡೆಯುತ್ತಿದೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಕದನ ಆರಂಭಗೊಂಡಿದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಡಿಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪಿಎಫ್‌ಐ, ಎಸ್‌ಡಿಪಿಐ ಪುಂಡರ ಕೇಸ್‌ ವಾಪಾಸ್‌ ಪಡೆದಿತ್ತು. ಈ ಸಂಘಟನೆಗಳ ಕಾರ್ಯಕರ್ತರು ದಲಿತ ಶಾಸಕನ ಮನೆ ಸುಟ್ಟರು. ರಾಜ್ಯ ಕಾಂಗ್ರೆಸ್ ತನ್ನ ಶಾಸಕನ ಪರವಾಗಿ ಧ್ವನಿ ಎತ್ತಲೇ ಇಲ್ಲ. ಅಹಿಂದ ಎನ್ನುವ ಸಿದ್ದರಾಮಯ್ಯ ತನ್ನದೇ ಪಕ್ಷದ ದಲಿತ ಶಾಸಕನ ಬಗ್ಗೆ ದಿವ್ಯಮೌನ ವಹಿಸಿದ್ದಾರೆ.

ಬಿಜೆಪಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಹೇಳಿಕೆಗಳನ್ನು ಕೋಟ್​ ಮಾಡಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುವುದು:🔹ಜೆಡಿಎಸ್‌ ಒಂದು ಪಕ್ಷವೇ ಅಲ್ಲ🔹ಇನ್ನೊಬ್ಬರ ಹೆಗಲೇರಿ ಅಧಿಕಾರ ಅನುಭವಿಸುವವರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳುವುದು:🔹ಜಾತ್ಯತೀತ ಪಕ್ಷ ನಮ್ಮ ಜೊತೆಗಿರಬೇಕು🔹ಮೈಸೂರಿನಲ್ಲಿ ಮೈತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಸೇರಿಕೊಂಡು ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕುಟುಕಿದೆ.

ABOUT THE AUTHOR

...view details