ಕರ್ನಾಟಕ

karnataka

ETV Bharat / state

ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತ ಕಂಡರೆ ಸಿದ್ದರಾಮಯ್ಯಗೆ ಅದೇಕೆ ಅಸಹನೆ?: ಬಿಜೆಪಿ - ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತ ಕಂಡರೆ ಸಿದ್ದರಾಮಯ್ಯಗೆ ಅದೇಕೆ ಅಸಹನೆ?: ಬಿಜೆಪಿ

ನಾನೂ ಹಿಂದೂ ಎನ್ನುವ ಸಿದ್ದರಾಮಯ್ಯನವರಿಗೆ ಟಿಪ್ಪುವನ್ನು ಮೈಸೂರು ಹುಲಿ ಎಂಬಂತೆ ಬಿಂಬಿಸುವಾಗ ಸಹಸ್ರಾರು ಸಂಖ್ಯೆಯಲ್ಲಿ ಮಡಿದ ಹಿಂದೂಗಳ ನೆನಪಾಗಲಿಲ್ಲವೇ?. ಮತಾಂಧ ಟಿಪ್ಪುವಿಗೆ ಜಯಂತಿ ಆಚರಿಸಿದ್ದು ಹಿಂದೂಗಳಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದೆ..

bjp tweet
ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ಸರಣಿ ಟ್ವೀಟ್

By

Published : Mar 26, 2022, 6:32 PM IST

ಬೆಂಗಳೂರು :ಹಿಂದೂ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳನ್ನು ಕಂಡರೆ ಸಿದ್ದರಾಮಯ್ಯನವರಿಗೆ ಅದೇಕೆ ಅಸಹನೆ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ. ಈ ಸಂಬಂಧ ಸರಣಿ ಟ್ವೀಟ್ ಮುಂದುವರಿಸಿರುವ ರಾಜ್ಯ ಬಿಜೆಪಿ ಘಟಕ, ಕೇಸರಿ ವಸ್ತ್ರ, ಕುಂಕುಮ, ಪೇಟ ಎಲ್ಲದರ ಮೇಲೂ ದ್ವೇಷ. ಹಿಂದೂ ವಿರೋಧಿ ನಿಲುವು ಏಕೆ?. ಸಿದ್ದರಾಮಯ್ಯ ಅವರ ಹಿಂದೂ ಪ್ರೀತಿ ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ. ವೀರಶೈವ-ಲಿಂಗಾಯತರ ನಡುವೆ ಧರ್ಮದ ಬೆಂಕಿ ಹಚ್ಚಿದ್ದು ನೀವಲ್ಲವೇ? ಎಂದು ಟೀಕಿಸಿದೆ.

ನಿಮ್ಮ ವೋಟ್‌ ಬ್ಯಾಂಕ್ ರಾಜಕಾರಣದ ಪ್ರತಿಫಲದಿಂದಾಗಿ ಇಂದು ಕಾಂಗ್ರೆಸ್ ವಿರೋಧ ಪಕ್ಷದಲ್ಲಿದೆ. ಹಿಂದೂ ವಿರೋಧಿ ನೀತಿ ಹೀಗೇ ಸಾಗಿದರೆ ನಾಮಾವಶೇಷವಾಗುವುದು ಖಚಿತ. ಸಿದ್ದರಾಮಯ್ಯನವರು ಅನ್ಯ ಧರ್ಮದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅವರನ್ನು ಓಲೈಸಲು ಅವರಂತೆ ಉಡುಗೆ, ತೊಡುಗೆ ತೊಡುತ್ತಾರೆ. ಹಿಂದೂಗಳ ಮಾರಣ ಹೋಮ ಮಾಡಿದ ಟಿಪ್ಪುವನ್ನು ವೈಭವಿಕರಿಸಿದ್ದು ಸಿದ್ದರಾಮಯ್ಯ ಎಂದು ಬಿಜೆಪಿ ಕಿಡಿ ಕಾರಿದೆ.

ನಾನೂ ಹಿಂದೂ ಎನ್ನುವ ಸಿದ್ದರಾಮಯ್ಯನವರಿಗೆ ಟಿಪ್ಪುವನ್ನು ಮೈಸೂರು ಹುಲಿ ಎಂಬಂತೆ ಬಿಂಬಿಸುವಾಗ ಸಹಸ್ರಾರು ಸಂಖ್ಯೆಯಲ್ಲಿ ಮಡಿದ ಹಿಂದೂಗಳ ನೆನಪಾಗಲಿಲ್ಲವೇ?. ಮತಾಂಧ ಟಿಪ್ಪುವಿಗೆ ಜಯಂತಿ ಆಚರಿಸಿದ್ದು ಹಿಂದೂಗಳಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ:ನಮ್ಮೆಲ್ಲ ಸ್ವಾಮೀಜಿಗಳ ಉದ್ದೇಶ ಒಂದೇ ಸಿದ್ದರಾಮಯ್ಯರನ್ನ ಸೋಲಿಸೋದು.. ಪ್ರಣವಾನಂದ ಸ್ವಾಮೀಜಿ

ABOUT THE AUTHOR

...view details