ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಮೋದಿ ಅವರನ್ನು ಸಮರ್ಥಿಸಿಕೊಂಡು ಪ್ರತ್ಯುತ್ತರ ನೀಡಿದೆ.
ಹೌದು ನಮ್ಮ ಪ್ರಧಾನಿ, ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ. ಬಾರ್‌ನಲ್ಲಿ ಡ್ಯಾನ್ಸ್ ಮಾಡಲಿಲ್ಲ. ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿಲ್ಲ. ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ ಎಂದು ತಿರುಗೇಟು ನೀಡಿದೆ.
ಅತ್ಯುತ್ತಮ ರಾಡಾರ್ ತಜ್ಞರು ಮೋದಿ :ಬಿಜೆಪಿಯ ಈ ಟ್ಟೀಟ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹೌದು ನಿಮ್ಮ ಹೆಬ್ಬೆಟ್ಟು ಗಿರಾಕಿ ನಿಜಕ್ಕೂ ವಿಭಿನ್ನ, ಕೈಹಿಡಿದವರಿಗೆ ಕೈಕೊಟ್ಟವರು, ಪರಸ್ತ್ರೀ ಮೇಲೆ ಗೂಢಾಚಾರಿಕೆ ನಡೆಸಿದವರು, ಎಲ್ಲೂ ಇಲ್ಲದ ಎಂಟೈರ್ ಪೊಲಿಟಿಕಲ್ ಸಯನ್ಸ್ ಓದಿದವರು!, ಈಮೇಲ್, ಡಿಜಿಟಲ್ ಕ್ಯಾಮೆರಾ ಎಲ್ಲೂ ಇಲ್ಲದಿದ್ದಾಗಲೇ ಇವರು ಬಳಸಿದರು, ಅತ್ಯುತ್ತಮ ರಾಡಾರ್ ತಜ್ಞರು! ಎಂದು ವ್ಯಂಗ್ಯವಾಡಿದೆ.
ಓದಿ:ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಬಂಡವಾಳ! ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ: ಕೈ ಆಕ್ರೋಶಕಾರಿ ಟ್ವೀಟ್