ಬೆಂಗಳೂರು:ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ತೀವ್ರ ಪೈಪೋಟಿ ಆರಂಭಗೊಂಡಿದ್ದು, ತಾವೇ ಮುಂದಿನ ಮುಖ್ಯಮಂತ್ರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಘೋಷಣೆ ಕೂಗಿಸಿಕೊಳ್ಳಲು ಸ್ಪರ್ಧೆಗಿಳಿದಿದ್ದಾರೆ. ಕುರ್ಚಿಗಾಗಿ ಕೈಗೆ ರಾಜ್ಯದ ಚುಕ್ಕಾಣಿ ಸಿಕ್ಕರೆ ಏನಾಗಲಿದ ಎಂದು ಯೋಜಿಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದೆ.
ಚುನಾವಣೆ ಮುನ್ನವೇ ಕಾಂಗ್ರೆಸ್ ಪಕ್ಷದ ನಾಯಕರೊಳಗಿನ ಕಾದಾಟ ಮತ್ತೆ ತಾರಕಕ್ಕೇರಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಿತ್ಯ ಬೀದಿಕಾಳಗ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಣಿಯಲೆಂದೇ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಂಬ ಹೊಸ ನಿಯಮವನ್ನು ಡಿಕೆಶಿ ಜಾರಿಗೆ ತಂದರು.
ಸಿದ್ದರಾಮಯ್ಯ ಅವರನ್ನು ಸೋಲಿಸಿದರೆ ಮಾತ್ರ ತಾನು ಸಿಎಂ ಆಗಬಹುದು ಎಂದು ಡಿಕೆ ಶಿವಕುಮಾರ್ ಬಲವಾಗಿ ನಂಬಿದ್ದಾರೆ. ಹೀಗಾಗಿ "ಸಿದ್ದು ಕ್ಷೇತ್ರ ನಾಡಿಮಿಡಿತ" ಪರೀಕ್ಷಿಸಲು ಡಿಕೆಶಿ ಅರ್ಜಿ ಸಲ್ಲಿಸುವ ನಿಯಮ ಜಾರಿಗೊಳಿಸಿದರು ಎಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಅಂತಿಮ ದಿನವನ್ನು ಎರಡೆರಡು ಬಾರಿ ಮುಂದಕ್ಕೆ ಹಾಕಿದರೂ ಡಿಕೆ ಶಿವಕುಮಾರ್ ಮಾತಿಗೆ ಸಿದ್ದರಾಮಯ್ಯ ಕಿಮ್ಮತ್ತೇ ನೀಡಲಿಲ್ಲ. ಸಿದ್ದರಾಮಯ್ಯ ಅರ್ಜಿ ಸಲ್ಲಿಸಬೇಕಾದರೆ ದೆಹಲಿಯಿಂದಲೇ ಅಪ್ಪಣೆ ಬರಬೇಕಾಯಿತು. ಡಿಕೆಶಿ ರಣತಂತ್ರಕ್ಕೆ ಸಿದ್ದರಾಮಯ್ಯ ನಿರ್ಲ್ಯಕ್ಷದ ಪ್ರತ್ಯುತ್ತರ ನೀಡಿದ್ದೇ? ಹೈಕಮಾಂಡ್ ಒತ್ತಡದಿಂದ.