ಕರ್ನಾಟಕ

karnataka

ETV Bharat / state

ಸೋನಿಯಾ ಆಗಮನದಿಂದ ಜೈಲುಹಕ್ಕಿ ಡಿಕೆಶಿ, ಭ್ರಷ್ಟರಾಮಯ್ಯಗೆ ಶಕ್ತಿ ಬಂದಿದ್ದು ಸುಳ್ಳಲ್ಲ: ಬಿಜೆಪಿ ವಾಗ್ದಾಳಿ - ಬಿಜೆಪಿ ವಾಗ್ದಾಳಿ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ ರಾಜ್ಯ ಬಿಜೆಪಿ ಟ್ವೀಟ್​ ಮೂಲಕ ಟೀಕಿಸಿದೆ.

bjp-tweet-against-sonia-gandhi-and-congress-leaders
ಸೋನಿಯಾ ಆಗಮನದಿಂದ ಜೈಲುಹಕ್ಕಿ ಡಿಕೆಶಿ, ಭ್ರಷ್ಟರಾಮಯ್ಯಗೆ ಶಕ್ತಿ ಬಂದಿದ್ದು ಸುಳ್ಳಲ್ಲ: ಬಿಜೆಪಿ ವಾಗ್ದಾಳಿ

By

Published : Oct 3, 2022, 9:02 PM IST

ಬೆಂಗಳೂರು:ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ. ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಆಗಮನದಿಂದ ಜೈಲುಹಕ್ಕಿ ಡಿಕೆ ಶಿವಕುಮಾರ್ ಹಾಗೂ ಭ್ರಷ್ಟರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ. ಭ್ರಷ್ಟರೆಲ್ಲ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ! ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ ಪ್ರಯೋಗಿಸಿದೆ.

ಸಿದ್ದು ಉಗ್ರಭಾಗ್ಯ ಹ್ಯಾಷ್ ಟ್ಯಾಗ್​​ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರನ್ನು ದೃಷ್ಟಿಯಲ್ಲಿರಿಸಿಕೊಂಡು ಟಾಂಗ್ ನೀಡಿದೆ‌. ಸೋನಿಯಾ ಗಾಂಧಿ ರಾಜ್ಯ ಭೇಟಿಯನ್ನೂ ಉಲ್ಲೇಖಿಸಿ ಕುಹಕವಾಡಿದೆ. ಕಾಂಗ್ರೆಸ್​​ನ ಪೇಸಿಎಂ ಅಭಿಯಾನದಿಂದ ಶುರುವಾದ ಕ್ಯೂಆರ್ ಕೋಡ್ ವಾರ್ ಇನ್ನೂ ಮುಂದುವರೆದಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಸಿದ್ದರಾಮಯ್ಯ ಫೋಟೋ ಒಳಗೊಂಡ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಿದೆ.

ಮತಾಂಧ ಟಿಪ್ಪು ಮೈಸೂರು ಪ್ರಾಂತ್ಯದ ಇಸ್ಲಾಮೀಕರಣಕ್ಕೆ ಮುಂದಾಗಿದ್ದ, ಅವನನ್ನು ಆರಾಧಿಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಡೆಯರ್ ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ಮೈಸೂರಿನ ರಾಜಮನೆತನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ನಿಮಗೆ ಚುನಾವಣೆ ಬಂದಾಗ ಇದೇ ಮೈಸೂರು ನೆನಪಾಯ್ತೇ? ಕಡ್ಡಾಯವಾಗಿ ಉರ್ದು ಕಲಿಯಬೇಕು ಎಂದು ಹೇರಿಕೆ ಮಾಡಿದ್ದ ಟಿಪ್ಪು. ಅವನನ್ನು ಆರಾಧಿಸುವ ರಾಜ್ಯ ಕಾಂಗ್ರೆಸ್, ಉರ್ದು ಬ್ಯಾನರ್ ಮೂಲಕವೇ ತೋಡೋ ಯಾತ್ರೆಗೆ ಸ್ವಾಗತ ಕೋರಿದೆ.

ಓಲೈಕೆಯ ರಾಜಕಾರಣಕ್ಕೆ ಕನ್ನಡವನ್ನೇ ಬಿಟ್ಟ ಕಾಂಗ್ರೆಸ್‌ಗೆ ಈ ದುರ್ಗತಿ ಬರಬಾರದಿತ್ತು. ಮೈಸೂರಿನ ಜನತೆಗೆ ಭೀತಿಯನ್ನು ಹಬ್ಬಿಸಿದ್ದ ಟಿಪ್ಪುವನ್ನು, ಜಯಂತಿ ಆಚರಿಸುವುದರ ಮೂಲಕ ಕಾಂಗ್ರೆಸ್ ಹೊತ್ತು ಮೆರೆದಿತ್ತು. ರಾಹುಲ್ ಗಾಂಧಿಯವರೇ, ಮೈಸೂರು ಎನ್ನುವುದು ತಾಯಿ ಚಾಮುಂಡೇಶ್ವರಿಯ ಶ್ರೀರಕ್ಷೆ ಇರುವ ಸ್ಥಳ. ಇಲ್ಲಿ ದುಷ್ಟ ಶಕ್ತಿಗಳಿಗೆ ಉಳಿಗಾಲವಿಲ್ಲ ನೆನಪಿಡಿ ಎಂದು ಬಿಜೆಪಿ ಟಾಂಗ್ ನೀಡಿದೆ.

ಇದನ್ನೂ ಓದಿ:ಸಿದ್ದರಾಮಯ್ಯರಿಂದ ಪಿಎಫ್ಐ ಭಾಗ್ಯ: ಕಂದಾಯ ಸಚಿವ ಅಶೋಕ್ ಲೇವಡಿ

ABOUT THE AUTHOR

...view details