ಕರ್ನಾಟಕ

karnataka

ETV Bharat / state

ಗೇಟ್ ಬೀಗ ಹಾಕಿ ಬೆಚ್ಚಗೆ ಕುಳಿತು ಬಿಟ್ಟಿ ಉಪದೇಶ ನೀಡಬೇಡಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

ಸಿದ್ದರಾಮಯ್ಯ ಅವರೇ, ನಮ್ಮ ಈ ಪ್ರಶ್ನೆಗಳಿಗೆ ನಿಜ ಹೇಳುವಿರಾ? ಕೋವಿಡ್ ಎರಡನೇ ಅಲೆ ಬಂದ ನಂತರ ಎಷ್ಟು ಬಾರಿ ನೀವು ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೀರಿ? ಎಲ್ಲಿ, ಎಷ್ಟು ಆರೈಕೆ ಕೇಂದ್ರ ಆರಂಭಿಸಿದ್ದೀರಿ? ಬೊಗಳೆ ಬಿಡುವುದನ್ನು ಸಾಕುಮಾಡಿ, ಜನರ ನೆರವಿಗೆ ಧಾವಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

bjp-tweet-against-siddaramaih
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ

By

Published : May 13, 2021, 5:07 PM IST

ಬೆಂಗಳೂರು: ಕೋವಿಡ್ ಹಿನ್ನೆಲೆ ಬಹುತೇಕ ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದಾರೆ. ಜನರ ಸಂಕಷ್ಟಕ್ಕೆ ಜತೆಯಾಗುತ್ತಿದ್ದಾರೆ. ಆದರೆ ವಲಸೆ ವೀರ ಸಿದ್ದರಾಮಯ್ಯ ಮಾತ್ರ ಬೆಂಗಳೂರಿನಲ್ಲಿ ಮನೆಯ ಗೇಟ್‌ಗೆ ಬೀಗ ಹಾಕಿ ಬೆಚ್ಚಗೆ ಕುಳಿತು ಬಿಟ್ಟಿ ಉಪದೇಶ ನೀಡುತ್ತಿದ್ದಾರೆ. ಬುರುಡೆರಾಮಯ್ಯ, ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.

ಅತೃಪ್ತ ಆತ್ಮ ಸಿದ್ದರಾಮಯ್ಯ ಅವರೇ, ಅಧಿಕಾರದಲ್ಲಿದ್ದಾಗ ಬಿಟ್ಟಿ ಭಾಗ್ಯಗಳ ಮೂಲಕ ರಾಜ್ಯದಲ್ಲಿ ಅಸ್ಥಿರತೆ ಮೂಡಿಸಿ, ಈಗ ನಾನು ಅಧಿಕಾರದಲ್ಲಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದರೆ ಎಂಬ 'ರೆ' ರಾಗ ಎಳೆಯುತ್ತಿದ್ದೀರಿ. ನೀವು ಅಧಿಕಾರದಲ್ಲಿದ್ದಾಗ ಮಾಡಿದ ಅವಾಂತರಗಳನ್ನು ಬಿಚ್ಚಿಡಬೇಕೇ? ಎಂದು ಬಿಜೆಪಿ ಪ್ರಶ್ನಿಸಿದೆ‌.

ಭಯದಿಂದ 'ಯಾರಿಗೂ ಪ್ರವೇಶವಿಲ್ಲ' ಎಂದು ಮನೆ ಮುಂದೆ ಬೋರ್ಡ್ ತಗುಲಿಸಿಕೊಂಡಿರುವ ಸಿದ್ದರಾಮಯ್ಯ ಅವರೇ, ಮನೆ ಒಳಗೆ ಕುಳಿತು ಏನೇನೋ ಬಡಾಯಿ ಕೊಚ್ಚಿಕೊಳ್ಳಬೇಡಿ. ಸಾಧ್ಯವಾದರೆ ನೀವು ಸೋತಿರುವ ಚಾಮುಂಡೇಶ್ವರಿ ಹಾಗೂ ಶಾಸಕರಾಗಿರುವ ಬಾದಾಮಿ ಕ್ಷೇತ್ರಕ್ಕೆ ಒಂದು ಸುತ್ತು ಹೋಗಿ ಬನ್ನಿ. ಆಗ ಜನರ ಕಷ್ಟದ ಅರಿವಾಗುತ್ತದೆ ಎಂದು ಟ್ವೀಟ್ ಮೂಲಕ ಟಾಂಗ್ ನೀಡಿದೆ.

ಸಿದ್ದರಾಮಯ್ಯ ಅವರೇ, ನಮ್ಮ ಈ ಪ್ರಶ್ನೆಗಳಿಗೆ ನಿಜ ಹೇಳುವಿರಾ? ಕೋವಿಡ್ ಎರಡನೇ ಅಲೆ ಬಂದ ನಂತರ ಎಷ್ಟು ಬಾರಿ ನೀವು ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದೀರಿ? ಎಲ್ಲಿ, ಎಷ್ಟು ಆರೈಕೆ ಕೇಂದ್ರ ಆರಂಭಿಸಿದ್ದೀರಿ? ಬೊಗಳೆ ಬಿಡುವುದನ್ನು ಸಾಕುಮಾಡಿ, ಜನರ ನೆರವಿಗೆ ಧಾವಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಬಾಯಿಬಿಟ್ಟರೆ ಬೊಗಳೆ ಬಿಡುವ ಸಿದ್ದರಾಮಯ್ಯ ಅವರೇ? ಬಾದಾಮಿಯಲ್ಲಿ ಎಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ ಎನ್ನುವ ಮಾಹಿತಿಯಿದೆಯೇ? ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಇರುವ ಆಸ್ಪತ್ರೆ ಎಷ್ಟಿದೆ? ಎಷ್ಟು ಜನರಿಗೆ ಲಸಿಕೆ ಕೊಡಿಸಿದ್ದೀರಿ? ಶಾಸಕರಾಗಿ ಇದು ನಿಮ್ಮ ಜವಾಬ್ದಾರಿ ಎಂಬುದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದೆ.

ಓದಿ:ನಿಮ್ಮಿಂದಾಗದಿದ್ದರೆ ಹೇಳಿ..ಜನರನ್ನು ಯಾಮಾರಿಸಬೇಡಿ: ಲಸಿಕೆ ವಿಚಾರದಲ್ಲಿ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ABOUT THE AUTHOR

...view details