ಬೆಂಗಳೂರು: ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ ಎನ್ನುವ ಕಾಂಗ್ರೆಸ್ ಟ್ವೀಟ್ಗೆ ಉತ್ತರಿಸಿರುವ ಬಿಜೆಪಿ, ಮೊದಲು ಉಪ ಚುನಾವಣೆಯಲ್ಲಿ ತಾಕತ್ತು ತೋರಿಸಿ, ತುಕ್ಕು ಹಿಡಿದಿದ್ದು ಯಾರಿಗೆ ಎಂದು ಜನರೇ ಉತ್ತರಿಸುತ್ತಾರೆ ಎಂದು ಹೇಳಿದೆ.
ಘೋಷಣೆಗೊಂಡಿರುವ ಉಪಚುನಾವಣೆಯಲ್ಲಿ ನಿಮ್ಮ ತಾಕತ್ತು ಮೊದಲು ತೋರಿಸಿ. ಆಮೇಲೆ ವಿಧಾನಸಭೆ ವಿಸರ್ಜಿಸುವ ಬಗ್ಗೆ ಚಿಂತೆ ಮಾಡುವಿರಂತೆ. ಜೈಲಿನಿಂದ ಬಿಡುಗಡೆಗೊಂಡ ಭ್ರಷ್ಟಾಚಾರದ ಆರೋಪಿ ಅಧ್ಯಕ್ಷರಿಗೆ ಒಂದೇ ಒಂದು ಚುನಾವಣೆ ಗೆಲ್ಲಲಾಗಲಿಲ್ಲ. ಈ ಉಪಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಕಾಲೆಳೆದಿದೆ.