ಕರ್ನಾಟಕ

karnataka

ETV Bharat / state

ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ: ಬಿಜೆಪಿ ಟ್ವೀಟ್ - BJP Tweet about congress leaders

ಸಿಡಿ ಪ್ರಕರಣದ ಸಂತ್ರಸ್ತೆ ನೇರವಾಗಿ ಮಹಾನಾಯಕನ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜೊತೆ ಇದ್ದಾನೆ ಎಂಬ ಮಾತುಗಳನ್ನಾಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ? ಎಂದು ಬಿಜೆಪಿ ಟ್ವೀಟ್ ಮಾಡಿದೆ.

bjp-tweet
ಬಿಜೆಪಿ ಟ್ವೀಟ್​

By

Published : Mar 26, 2021, 8:10 PM IST

ಬೆಂಗಳೂರು: ಸಿಡಿ ಲೇಡಿ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದ್ದಾಳೆ ಎನ್ನಲಾದ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯಾ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಕೈ ನಾಯಕರ ವಿರುದ್ಧ ಬಿಜೆಪಿ ಟ್ವೀಟ್

ಆ ಪ್ರಕರಣದ ʼಸಂತ್ರಸ್ತೆʼ ನೇರವಾಗಿ ಮಹಾನಾಯಕನ ಹೆಸರು ಪ್ರಸ್ತಾಪ ಮಾಡಿದ್ದಾಳೆ. ಮಹಾನಾಯಕ ನಮ್ಮ ಜೊತೆ ಇದ್ದಾನೆ ಎಂಬ ಮಾತುಗಳನ್ನಾಡಿದ್ದಾಳೆ. ಸದನದಲ್ಲಿ ಬೊಬ್ಬಿರಿದ ಮಹಾಶೂರರು ಈಗೇನು ಹೇಳುತ್ತಾರೆ?. ಕಾಂಗ್ರೆಸ್‌ ಕಚೇರಿಯಲ್ಲೇ ಷಡ್ಯಂತ್ರ ನಡೆದಿದೆಯೇ? ಎಂದು ಬಿಜೆಪಿ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ನ ಕೈವಾಡವಿದೆ ಎಂದು ಪರೋಕ್ಷ ಆರೋಪ ಮಾಡಿದೆ.

ಇದನ್ನೂ ಓದಿ:ಏಪ್ರಿಲ್ 7 ರಿಂದ ಸಾರಿಗೆ ಸಿಬ್ಬಂದಿ ಮುಷ್ಕರ ಕರೆ; ಪರ್ಯಾಯ ವ್ಯವಸ್ಥೆಗೆ ಸರ್ಕಾರದ ಸಿದ್ಧತೆ

ABOUT THE AUTHOR

...view details