ಬೆಂಗಳೂರು: ರಾಜ್ಯ ಮಲ್ಲೇಶ್ವರಂ ಬಿಜೆಪಿ ಕಚೇರಿಯಿಂದ ಬೆಳಗಾವಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಲಕರಣೆಗಳನ್ನು ರವಾನಿಸಲಾಯಿತು.
ಬಿಜೆಪಿ ಕಚೇರಿಯಿಂದ ಬೆಳಗಾವಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ರವಾನೆ..
ಮಲ್ಲೇಶ್ವರಂ ಬಿಜೆಪಿ ಕಚೇರಿಯಿಂದ ಬೆಳಗಾವಿಯ ಪ್ರವಾಹ ಪೀಡಿತರಿಗೆ ನೀಡುವ ಪರಿಹಾರ ಸಾಮಾಗ್ರಿ ಹೊತ್ತ ಎರಡು ಟೆಂಪೋಗೆ ಶಾಸಕ ಡಾ.ಅಶ್ವಥ್ ನಾರಾಯಣ್ ಚಾಲನೆ ನೀಡಿದರು.
ಪರಿಹಾರ ಸಾಮಾಗ್ರಿ ಹೊತ್ತ ಎರಡು ಟೆಂಪೋಗೆ ಶಾಸಕ ಡಾ.ಅಶ್ವಥ್ ನಾರಾಯಣ್ ಚಾಲನೆ ನೀಡಿದರು. ಅಗತ್ಯ ವಸ್ತುಗಳಾದ ಬೆಡ್‌ಶೀಟ್, ಮೆಡಿಸಿನ್, ಬಿಸ್ಕತ್, ನೀರಿನ ಬಾಟಲ್, ಆಹಾರ ಪದಾರ್ಥಗಳನ್ನು ಕೊಂಡೊಯ್ಯಲಾಗಿದೆ.
ಈ ವೇಳೆ ಮಾತನಾಡಿದ ಅಶ್ವತ್ ನಾರಾಯಣ್, ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿದೆ. ಅವರಿಗೆ ನೆರವಿನ ಹಸ್ತ ನೀಡುವ ಸಲುವಾಗಿ ಬಿಜೆಪಿ ಅಗತ್ಯ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸುತ್ತಿದೆ. ಇದು ಮೊದಲ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರು, ಸಾಮಾಜಿಕ ಸಂಘ-ಸಂಸ್ಥೆಗಳು ನೀಡುವ ಪರಿಹಾರ ವಸ್ತುಗಳನ್ನು ಸಂತ್ರಸ್ತರಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.ಇದೇ ವೇಳೆ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್ ಹಾಗೂ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.