ಕರ್ನಾಟಕ

karnataka

ರಾಮುಲುಗೆ ಮಾಹಿತಿ ನೀಡದೆಯೇ ಪಿಎ ವಿರುದ್ಧ ದೂರು: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ್ರಾ ವಿಜಯೇಂದ್ರ?

By

Published : Jul 2, 2021, 7:09 PM IST

ಒಂದು ವೇಳೆ ಶ್ರೀರಾಮುಲು ಗಮನಕ್ಕೆ ತಂದಿದ್ದರೆ ಈ ಪ್ರಕರಣ ಅಲ್ಲಿಯೇ ಇತ್ಯರ್ಥವಾಗುತ್ತಿತ್ತು, ಪ್ರಕರಣ ಮುಚ್ಚಿಹೋಗುತ್ತಿತ್ತು ಎನ್ನುವುದನ್ನು ಅರಿತೇ ವಿಜಯೇಂದ್ರ ರಾಜಕೀಯ ದಾಳ ಉರುಳಿಸಿದ್ದಾರೆ‌. ಆಡಳಿತದಲ್ಲಿ ತಮ್ಮ ಹಸ್ತಕ್ಷೇಪ ಇಲ್ಲ ಎನ್ನುವುದನ್ನು ಸಮರ್ಥಿಸಿಕೊಳ್ಳಲು ಈ ಪ್ರಕರಣ ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

BJP state vice president BY Vijayendra new plan
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ನ್ಯೂ ಪ್ಲ್ಯಾನ್​

ಬೆಂಗಳೂರು:ಆಡಳಿತದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎನ್ನುವ ಸ್ವಪಕ್ಷೀಯ ಮತ್ತು ಪ್ರತಿಪಕ್ಷ ನಾಯಕರ ಆರೋಪಗಳಿಂದ ಮುಕ್ತರಾಗಲು ಮತ್ತು ಯಡಿಯೂರಪ್ಪ ಸರ್ಕಾರದಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲು ಶ್ರೀರಾಮುಲು ಆಪ್ತನ ಪ್ರಕರಣವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಬಳಸಿಕೊಂಡು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಸಚಿವ ಶ್ರೀರಾಮುಲು ಆಪ್ತ ಸಹಾಯಕ ತಮ್ಮ ಹೆಸರಿನಲ್ಲಿ ಹಣ ವಸೂಲಿ ಮಾಡಿ ಜನರಿಗೆ ಮೋಸ ಮಾಡುತ್ತಿರುವ ಮಾಹಿತಿಯನ್ನು ಸಚಿವರ ಗಮನಕ್ಕೆ ತರದೆ ನೇರವಾಗಿ ದೂರು ನೀಡಿದ್ದರ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆ ಎನ್ನಲಾಗುತ್ತಿದೆ. ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪ ಪದೇ ಪದೇ ಕೇಳಿಬರುತ್ತಿತ್ತು, ಸಚಿವರು, ಶಾಸಕರು ಆರೋಪ ಮಾಡಿದ್ದರು, ಈ ಆರೋಪದಿಂದ ಹೊರಬರಲು ಒಂದು ಅವಕಾಶ ಬೇಕಿತ್ತು, ಇದರಿಂದ‌ ಹೊರಬರಲು ಹಾಗು ತಮ್ಮ ಮೇಲಿನ ಆರೋಪ ತೊಡೆದುಕೊಳ್ಳಲು ವಿಜಯೇಂದ್ರ ದೂರು ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಶ್ರೀರಾಮುಲು ಪಿಎ ಬಂಧನ ವಿರೋಧಿಗಳಿಗೆ ಅಪಪ್ರಚಾರದ ಸರಕಾಗಲಿದೆ ; ಕಿಡಿ ಹೊತ್ತಿಸುತ್ತಾ ವಿಜಯೇಂದ್ರ ಟ್ವೀಟ್​?

ತಮ್ಮ ಹೆಸರು ದುರ್ಬಳಕೆ ಮಾಡಿಕೊಳ್ಳದಂತೆ ಸಚಿವ ರಾಮುಲು ಮೂಲಕ ಅವರ ಆಪ್ತ ಸಹಾಯಕನಿಗೆ ಹೇಳುವ ಎಲ್ಲ ಅವಕಾಶ ಇದ್ದರೂ ಕೂಡ ವಿಜಯೇಂದ್ರ ಆ ಕೆಲಸ ಮಾಡಲಿಲ್ಲ. ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳಲು ಅವಕಾಶವಿದ್ದರೂ ಅದರ ಬದಲು ದೂರು ನೀಡುವ ದಾರಿಯನ್ನು ವಿಜಯೇಂದ್ರ ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ ವಿರುದ್ಧದ ಆರೋಪಕ್ಕೆ ಉತ್ತರ ನೀಡಲು ಈ ಪ್ರಕರಣ ಬಳಕೆ ಮಾಡಿಕೊಂಡಿದ್ದಾರೆ, ಸಿಎಂ ಗಮನಕ್ಕೆ ತಂದೇ ದೂರು ನೀಡಲಾಗಿದೆ. ಪಕ್ಷ ಹಾಗು ಸರ್ಕಾರದ ವರ್ಚಸ್ಸಿಗೆ ದಕ್ಕೆಯಾಗಲಿದೆ ಎನ್ನುವ ವಿಜಯೇಂದ್ರ ಮಾತಿಗೆ ಸಹಮತಿಸಿ ದೂರು ನೀಡಲು ಸಿಎಂ ಸಮ್ಮತಿಸಿದರು ಎನ್ನಲಾಗಿದೆ.

ಒಂದು ವೇಳೆ ಶ್ರೀರಾಮುಲು ಗಮನಕ್ಕೆ ತಂದಿದ್ದರೆ ಈ ಪ್ರಕರಣ ಅಲ್ಲಿಯೇ ಇತ್ಯರ್ಥವಾಗುತ್ತಿತ್ತು, ಪ್ರಕರಣ ಮುಚ್ಚಿಹೋಗುತ್ತಿತ್ತು ಎನ್ನುವುದನ್ನು ಅರಿತೇ ವಿಜಯೇಂದ್ರ ರಾಜಕೀಯ ದಾಳ ಉರುಳಿಸಿದ್ದಾರೆ‌. ಆಡಳಿತದಲ್ಲಿ ತಮ್ಮ ಹಸ್ತಕ್ಷೇಪ ಇಲ್ಲ ಎನ್ನುವುದನ್ನು ಸಮರ್ಥಿಸಿಕೊಳ್ಳಲು ಈ ಪ್ರಕರಣ ಬಳಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರೀರಾಮಲು ಪಿಎ ವಂಚನೆ ಆರೋಪ ಪ್ರಕರಣ : ಒಂದೇ ದಿನಕ್ಕೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ ಸಿಸಿಬಿ

ಈ ಪ್ರಕರಣದ ಮೂಲಕ ಆಡಳಿತದಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಎನ್ನುವುದು ಮತ್ತು ತಮ್ಮ ಹೆಸರಿನ ದುರ್ಬಳಕೆ ನಡೆಯುತ್ತಿದೆ, ತಮ್ಮ ಹೆಸರೇಳಿಕೊಂಡು ಬೇರೆಯವರು ಇಂತಹ ಚಟುವಟಿಕೆ ನಡೆಸುತ್ತಿದ್ದಾರೆ, ತಮ್ಮ ವಿರುದ್ಧದ ಆರೋಪಗಳಿಗೆ ಬೇರೆಯವರು ಮಾಡಿದ‌್ದ ಇಂತಹ ಕೆಲಸ ಕಾರಣ ಎಂದು ತೋರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಇತ್ತೀಚೆಗೆ ವಿಜಯೇಂದ್ರ ದೆಹಲಿಗೆ ತೆರಳಿದ್ದಾಗ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬುದ್ದಿ ಮಾತು ಹೇಳಿ ಕಳಿಸಿದ್ದರು. ಆಡಳಿತದಲ್ಲಿ ಹಸ್ತಕ್ಷೇಪದ ಆರೋಪ ಕಡಿಮೆಯಾಗಬೇಕು, ಇದು ಒಳ್ಳೆಯ ಬೆಳವಣಿಗೆಯಲ್ಲ, ಯಡಿಯೂರಪ್ಪ ಆಡಳಿತಕ್ಕೂ ಇದರಿಂದ ತೊಂದರೆಯಾಗಲಿದೆ ಅಲ್ಲದೆ ಕೆಟ್ಟ ಹೆಸರು ಬರಲಿದೆ ಹಾಗಾಗಿ ಇಂತಹ ಆರೋಪ ಬಾರದಂತೆ ಎಚ್ಚರ ವಹಿಸಿ ಎಂದು ತಿಳಿಹೇಳಿ ಕಳಿಸಿದ್ದರು. ಈಗ ಈ ಪ್ರಕರಣದ ಮೂಲಕ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಕುರಿತು ತಮ್ಮ ವಿರುದ್ಧದ ಆರೋಪ ಸುಳ್ಳು, ತಮ್ಮ ಹೆಸರಿನ ದುರ್ಬಳಕೆ ಆಗಿದೆ ಎಂದು ಬಿಂಬಿಸಿಕೊಳ್ಳಲು ಈ ಪ್ರಕರಣ ಬಳಸಿಕೊಳ್ಳಲು ಸಚಿವ ರಾಮುಲು ಗಮನಕ್ಕೆ ತಾರದೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

ಒಂದು ಕಡೆ ತಮ್ಮ ವಿರುದ್ಧದ ಆರೋಪ ಸುಳ್ಳು ಎಂದು ಬಿಂಬಿಸಿಕೊಳ್ಳುವುದು ಮತ್ತೊಂದು ಕಡೆ ಯಡಿಯೂರಪ್ಪ ಆಡಳಿತದಲ್ಲಿ ಹಸ್ತಕ್ಷೇಪ ನಡೆಯುತ್ತಿಲ್ಲ ಎನ್ನುವ ಸಂದೇಶವನ್ನು ವರಿಷ್ಠರಿಗೆ ತಲುಪಿಸುವುದು ವಿಜಯೇಂದ್ರ ಉದ್ದೇಶವಾಗಿದ್ದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರಗಾರಿಕೆ ಮಾಡಿದ್ದಾರೆ ಎನ್ನಲಾಗಿದೆ.

For All Latest Updates

ABOUT THE AUTHOR

...view details