ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಮತ್ತೆ ಶುರುವಾದ ಆಂತರಿಕ ಕಲಹ : ವರಿಷ್ಠರಿಗೆ ವರದಿ ನೀಡಿದ ರಾಜ್ಯ ಘಟಕ - BJP High command

ಸಿ.ಪಿ ಯೋಗೇಶ್ವರ್ ದೆಹಲಿ ಭೇಟಿ, ರಾಜ್ಯದ ಯಾರಾದರೂ ನಾಯಕರು ದೆಹಲಿಗೆ ಹೋಗಿ ಬಂದ ನಂತರ ನಡೆಯುವ ನಾಯಕತ್ವ ಬದಲಾವಣೆ ವದಂತಿ, ಹೀಗೆ ಶಾಸಕರ ಹೇಳಿಕೆಗಳ ಕುರಿತು ರಾಜ್ಯ ಬಿಜೆಪಿ ಘಟಕ ವರದಿ ತಯಾರಿಸಿ ಹೈಕಮಾಂಡ್ ಅಂಗಳಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ..

ರಾಜ್ಯ ಬಜೆಪಿ ಘಟಕ
ರಾಜ್ಯ ಬಜೆಪಿ ಘಟಕ

By

Published : May 28, 2021, 8:36 PM IST

ಬೆಂಗಳೂರು : ರಾಜ್ಯ ಬಿಜೆಪಿ ಪಾಳಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತು ರಾಜ್ಯ ಘಟಕ ಸವಿಸ್ತಾರವಾದ ಮಾಹಿತಿ ಒಳಗೊಂಡ ವರದಿ ರವಾನಿಸಿದೆ.

ನಾಯಕತ್ವ ಬದಲಾವಣೆ ವದಂತಿ, ಸರ್ಕಾರದಲ್ಲಿ ಸಿಎಂ ಪುತ್ರನ ಹಸ್ತಕ್ಷೇಪದ ಆರೋಪ, ಮೂರು ಪಕ್ಷಗಳ ಸರ್ಕಾರ ಇದೆ ಎನ್ನುವ ಸಿ.ಪಿ ಯೋಗೇಶ್ವರ್ ಹೇಳಿಕೆ, ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕರು ನೀಡಿದ ಹೇಳಿಕೆಗಳು, ನಾಯಕತ್ವ ಬದಲಾವಣೆ ವದಂತಿ ತಿರಸ್ಕರಿಸಿ ಬಿಜೆಪಿ ಶಾಸಕರು,‌ ಸಚಿವರು ನೀಡಿದ ಹೇಳಿಕೆಗಳು ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಸಮಗ್ರ ವರದಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಳುಹಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸಿ.ಪಿ ಯೋಗೇಶ್ವರ್ ದೆಹಲಿ ಭೇಟಿ, ರಾಜ್ಯದ ಯಾರಾದರೂ ನಾಯಕರು ದೆಹಲಿಗೆ ಹೋಗಿ ಬಂದ ನಂತರ ನಡೆಯುವ ನಾಯಕತ್ವ ಬದಲಾವಣೆ ವದಂತಿ, ನಾಯಕತ್ವ ಬದಲಾವಣೆಗೆ ಕೆಲವರು ಪ್ರಯತ್ನ ನಡೆಸುತ್ತಿರುವುದು ನಾಲಾಯಕ್ ಜನ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿರುವುದು, ಪ್ರತಿಪಕ್ಷ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಷಯವನ್ನೇ ಅಸ್ತ್ರವಾಗಿ ಪ್ರಯೋಗಿಸಲು ಆರಂಭಿಸಿರುವುದು ಸೇರಿದಂತೆ ಎಲ್ಲವನ್ನು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ ಬಿಜೆಪಿ ಪಾಳಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ನಮ್ಮ ಗಮನಕ್ಕೆ ಏಕೆ ತರಲಿಲ್ಲ ಎಂದು ವರಿಷ್ಠರು ಪ್ರಶ್ನೆ ಮಾಡಿದರೆ ಕಷ್ಟ ಎನ್ನುವ ಕಾರಣಕ್ಕೆ ಮೊದಲೇ ಎಲ್ಲ ಮಾಹಿತಿಯನ್ನು ಹೈಕಮಾಂಡ್​ಗೆ ರವಾನಿಸಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಇನ್ನೇ‌ನಿದ್ದರೂ ಮುಂದಿನದನ್ನು ವರಿಷ್ಠರೇ ನೋಡಿಕೊಳ್ಳಲಿ ಎನ್ನುವ ನಿರ್ಧಾರಕ್ಕೆ ರಾಜ್ಯ ಘಟಕ ಬಂದಂತಿದೆ.

ಇದನ್ನೂ ಓದಿ:ಸಿ.ಟಿ.ರವಿ ಮನೆಗೆ ನಳಿನ್​ ಕುಮಾರ್​ ಕಟೀಲ್​​​ ದಿಢೀರ್ ಭೇಟಿ!

ABOUT THE AUTHOR

...view details