ಕರ್ನಾಟಕ

karnataka

ETV Bharat / state

ಚುನಾವಣಾ ಅಖಾಡಕ್ಕೆ ಕೇಸರಿ ಪಡೆ ತಾಲೀಮು, ನ.25ರಿಂದ ರಾಜ್ಯ ಪ್ರಶಿಕ್ಷಣ ವರ್ಗ: ನಿರ್ಮಲ್ ಕುಮಾರ್ ಸುರಾನ - ಈಟಿವಿ ಭಾರತ ಕನ್ನಡ

ಬಿಜೆಪಿ ರಾಜ್ಯ ಪ್ರಶಿಕ್ಷಣ ವರ್ಗವು ನವೆಂಬರ್ 25 ರಿಂದ ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್​ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

bjp-state-training-classes-in-shimoga
ಚುನಾವಣಾ ಅಖಾಡಕ್ಕೆ ಕೆಸರಿ ಪಡೆ ತಾಲೀಮು, ನ.25ರಿಂದ ರಾಜ್ಯ ಪ್ರಶಿಕ್ಷಣ ವರ್ಗ: ನಿರ್ಮಲ್ ಕುಮಾರ್ ಸುರಾಣ

By

Published : Nov 24, 2022, 2:07 PM IST

ಬೆಂಗಳೂರು:ಬಿಜೆಪಿ ರಾಜ್ಯ ಪ್ರಶಿಕ್ಷಣ ವರ್ಗವು ನವೆಂಬರ್ 25ರಿಂದ ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಪದಾಧಿಕಾರಿಗಳು, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಪ್ರಭಾರಿಗಳು ಅಪೇಕ್ಷಿತರಿದ್ದು, 3 ದಿನಗಳ ಕಾಲ ಪಕ್ಷದ ತತ್ವ- ಸಿದ್ಧಾಂತಗಳ ಭೂಮಿಕೆ ಸಂಬಂಧ ಮಾರ್ಗದರ್ಶನ ನೀಡಲಾಗುವುದು. ಶಾರೀರಿಕ ಮತ್ತು ಬೌದ್ಧಿಕವಾಗಿ ಗುಣಮಟ್ಟದ ಕಾರ್ಯಕರ್ತರನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಇದನ್ನು ಸಂಘಟಿಸಲಾಗುತ್ತಿದೆ. 27ರಂದು ಸಮಾರೋಪ ಕಾರ್ಯಕ್ರಮವು ಜರುಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯ ಪ್ರವಾಸ ನಡೆಸುತ್ತಿರುವ ಬಿಜೆಪಿ ನಾಯಕರು, ಜನ ಸಂಕಲ್ಪ ಸಮಾವೇಶಗಳ ಮೂಲಕ ಜನರ ಬಳಿಗೆ ತೆರಳಿದ್ದು, ಚುನಾವಣೆಯ ಸಿದ್ಧತೆಗೆ ಅಧಿಕೃತವಾಗಿ ತಾಲೀಮು ಆರಂಭಿಸಲು ರಾಜ್ಯ ಪ್ರಶಿಕ್ಷಣ ವರ್ಗವನ್ನು ಆಯೋಜಿಸಿದೆ.

ಇದನ್ನೂ ಓದಿ:ಸಚಿವಾಕಾಂಕ್ಷಿಗಳ ಪಟ್ಟಿ ಬಿಡಿ, ಕ್ಷೇತ್ರವಾರು ಮಾಹಿತಿ ನೀಡಿ: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮಹತ್ವದ ಸಂದೇಶ

ABOUT THE AUTHOR

...view details